ಬೆಳ್ತಂಗಡಿ: ಯುವಬಿಲ್ಲವ ವೇದಿಕೆ ಇದರ ಸಭೆಯು ಮಾ.16ರಂದು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಇವರ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ನೂತನ ಪದಾದಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಎಂ.ಕೆ.ಪ್ರಸಾದ್ ಈ ಮೊದಲೇ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಮನೋಜ್ ಕುಂಜರ್ಪ, ಸೀತಾರಾಮ ಹುಣ್ಸೆಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಸಾಲಿಯಾನ್ ಅರಳಿ, ಜೊತೆ ಕಾರ್ಯದರ್ಶಿಯಾಗಿ ಸುರೇಂದ್ರ ಕೋಟ್ಯಾನ್ ಬೆಳ್ತಂಗಡಿ, ಕೋಶಾಧಿಕಾರಿಯಾಗಿ ಪುರಂದರ ಪೆರಾಜೆ, ನಾರಾಯಣ ಗುರು ತತ್ತ್ವ ಪ್ರಚಾರ ಕಾರ್ಯದರ್ಶಿಯಾಗಿ ಯೋಗೀಶ್ ಸುವರ್ಣ ಅಡ್ಡಕೊಡಂಗೆ,ಕ್ರೀಡಾ ಕಾರ್ಯದರ್ಶಿಯಾಗಿ ಪಿ ವಿನೋದ್ ಪ್ರಸಾದ್ ಕಲ್ಲಾಜೆ, ಪವನ್ ಕಟ್ಟೆ, ದೇವಿ ಪ್ರಸಾದ್ ಬರಮೇಲು, ಸಾಂಸ್ಕೃತಿಕ ಕಾರ್ಯದರ್ಶಿ ಸಚಿನ್ ಹುಣ್ಸೆಕಟ್ಟೆ, ಜಯಂತ್ ಕೋಟ್ಯಾನ್ ಕುಕ್ಕೇಡಿ, ಕೇಶವ ಮುಂಡಾಜೆ, ಪ್ರಚಾರ ಕಾರ್ಯದರ್ಶಿಯಾಗಿ ಆಕಾಶ್ ಪೂಜಾರಿ ಓಡಿಲ್ನಾಳ, ಸಂಘಟನಾ ಕಾರ್ಯದರ್ಶಿಗಳಾಗಿ ಅಳದಂಗಡಿ ಜಿ ಪಂ ವ್ಯಾಪ್ತಿಗೆ ಹರೀಶ್ ಬಳೆಂಜ, ರಕ್ಷಿತ್ ಪಿಜಕೊಡಂಗೆ, ರಾಘವೇಂದ್ರ ಕೋಟ್ಯಾನ್ ಮೆಲಂತಬೆಟ್ಟು, ಪ್ರಸಾದ್ ಕರಂಬಾರು, ನಾರಾವಿ ಜಿ ಪಂ ಹಿತೇಶ್ ಸಾವ್ಯ, ಸುಜಿತ್ ಬಜಿರೆ, ಬೆಳ್ತಂಗಡಿ ನಗರ ವಸಂತ ಸಾಲಿಯಾನ್ ಕೆಂಬರ್ಜೆ, ಸುರೇಶ್ ಮಾಪಲಾಡಿ, ಸಂತೋಷ್ ಕರ್ಕೇರ, ಧರ್ಮಸ್ಥಳ ಜಿ ಪಂ ಸಂಕೇತ್ ಪೂಜಾರಿ ತೋಟತ್ತಾಡಿ, ಸತೀಶ್ ತೋಟತ್ತಾಡಿ, ಶ್ರೀಧರ ಪೂಜಾರಿ ಧರ್ಮಸ್ಥಳ, ಉಜಿರೆ ಜಿ ಪಂ ಯುವರಾಜ ಮಣಿಕ್ಕೆ, ನಿರಂಜನ ಕಡಂಬು, ಕಣಿಯೂರು ಜಿ ಪಂ ಶಿವಶಂಕರ ಪುತ್ತಿಲ, ಹರಿಪ್ರಸಾದ್, ಲಾಯಿಲ ಜಿ ಪಂ ರತ್ನಾಕರ ಗುರಿಪಳ್ಳ, ಪ್ರಸಾದ್ ಏಣೀರು, ನಿತಿನ್ ಬಿರ್ವ, ಹಾಗೂ ಸಲಹೆಗಾರರಾಗಿ ಹರೀಶ್ ಬರಮೇಲುರವರು ಆಯ್ಕೆಯಾಗಿದ್ದಾರೆ.
ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಮ್ ಕೆ ಪ್ರಸಾದ್ ಸಂಘಟನೆಯ ಜವಾಬ್ದಾರಿಯ ಬಗ್ಗೆ ಪದಾದಿಕಾರಿಗಳಿಗೆ ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್ ಕೋಟ್ಯಾನ್, ಕೋಶಾಧಿಕಾರಿ ಪ್ರಶಾಂತ್ ಮಚ್ಚಿನ, ನಿರ್ದೇಶಕರುಗಳಾದ ಜಯ ಪೂಜಾರಿ ನಡ, ಚಂದ್ರ ಶೇಖರ್ ಇಂದಬೆಟ್ಟು, ಕಮಲಾಕ್ಷ ಬೆಳ್ತಂಗಡಿ, ಸುನಿಲ್ ಕನ್ಯಾಡಿ, ರವೀಂದ್ರ ಬಿ ಅಮೀನ್, ತರುಶ್ ಹೇರಾಜೆ, ಗುರುರಾಜ್ ಗುರಿಪಳ್ಳ ಉಪಸ್ಥಿತರಿದ್ದರು.