ಬೆಳ್ತಂಗಡಿ: ಮಂಗಳೂರು ಇಂಡಿಯಾನ ಆಸ್ಪತ್ರೆಯ ಮುಖ್ಯಸ್ಥ, ಅಂತಾರಾಷ್ಟ್ರೀಯ ಖ್ಯಾತಿಯ ಹೃದಯ ತಜ್ಞ ಡಾ.ಯೂಸುಫ್ ಕುಂಬ್ಲೆ ಅವರ ತಾಯಿಯ ಹೆಸರಿನಲ್ಲಿರುವ ಫಾತಿಮಾ ಹೆಲ್ತ್ ಫೌಂಡೇಶನ್ ವತಿಯಿಂದ 35 ಕುಟುಂಬಗಳಿಗೆ ರಂಝಾನ್ ಆಹಾರ ವಸ್ತುಗಳ ಕಿಟ್ ವಿತರಿಸಲಾಯಿತು.
ಹಿರಿಯ ಸಮಾಜ ಸೇವಕ, ಇಂಡಿಯಾನ ಆಸ್ಪತ್ರೆಯ ಒಡನಾಡಿ ಅಬ್ಬೋನು ಮದ್ದಡ್ಕ ಅವರ ನಿವಾಸದಲ್ಲಿ ಮಾ.14ರಂದು ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಜಮೀಯತುಲ್ ಫಲಾಹ್ ಜಿಲ್ಲಾ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಲೆತೀಫ್ ಸಾಹೆಬ್ ವಹಿಸಿದ್ದು, ಡಾ.ಯೂಸುಫ್ ಕುಂಬ್ಲೆ ಅವರ ಆರೋಗ್ಯ ಸೇವೆಯ ಪರಿಯನ್ನು ವಿವರಿಸಿದರು.
ಮದ್ದಡ್ಕ ನೂರುಲ್ ಹುದಾ ಜುಮ್ಮಾ ಮಸ್ಜಿದ್ ಖತೀಬ್ ಹಸನ್ ಮುಬಾರಕ್ ಸಖಾಫಿ ಪುಂಜಾಲಕಟ್ಟೆ ದುಆ ನೆರವೇರಿಸಿದರು.
ಇಬ್ರಾಹಿಂ ಮುಸ್ಲಿಯಾರ್, ಅಬ್ಬೋನು ಮದ್ದಡ್ಕ, ಅಬ್ಬಾಸ್ ಸುನ್ನತ್‌ಕೆರೆ ಉಪಸ್ಥಿತರಿದ್ದರು.
ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಬಳಿಕ ಆಯ್ದ ಫಲಾನುಭವಿಗಳಿಗೆ ಕಿಟ್ ಹಾಗೂ ಇನ್ನೂ ಅರ್ಹರಿಗೆ ಆರ್ಥಿಕ ಮೊತ್ತ ನೀಡಲಾಯಿತು.