ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ತಾಲೂಕು ವಿವಿಧೆಡೆ ಗಜರಾಜನ ಸಂಚಾರ ವ್ಯಾಪಕವಾಗಿತ್ತು.
ಆನೆ ಸಂಚಾರದಿಂದ ರೈತರ ಕೃಷಿ ಭೂಮಿ ಕೂಡ ನಾಶವಾಗಿತ್ತು.
ಆದರೆ ಇದೀಗ ಆನೆ ನೇತ್ರಾವತಿ ನದಿಯಲ್ಲಿ ಜಳಕ ಮಾಡಿ ಮುಂದೆ ಸಾಗಿದೆ.
ಗಜರಾಜ ಕೊಯ್ಯೂರು, ಕಣಿಯೂರು ದಾಟಿ ಮಲೆಂಗಲ್ಲು, ಪದ್ಮುಂಜ, ಪೊಯ್ಯ ಮೂಲಕ ಮೊಗ್ರು ಗ್ರಾಮದ ಬುಳೇರಿ ಬಂದು ಸಮೀಪದ ಕರಂಬಾರು ಸುದೆಪಿಲ ಸಮೀಪದ ನೇತ್ರಾವತಿಯಲ್ಲಿ ಜಳಕ ಮಾಡಿ ಮುಂದೆ ಸಾಗಿದೆ ಎಂದು ಮಾಹಿತಿ ಲಭಿಸಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಯನ್ನು ಗೋಳಿತೋಟ್ಟು ರಾಷ್ಟ್ರೀಯ ಹೆದ್ದಾರಿ ದಾಟಲು ಸಹಕರಿಸುತ್ತಿದ್ದಾರೆ.
p>