ದಕ್ಷಿಣ ಕನ್ನಡ ಜಿಲ್ಲೆಗೆ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಯಂತ್ರೋಪಕರಣಗಳು ಶೇ.50, 90ರ ಸಹಾಯಧನ ಲಭ್ಯ: ವಿವಿಧ ಬಗೆಯ ಯಂತ್ರೋಪಕರಣ ಪಡೆಯಲು ಅರ್ಜಿ ಆಹ್ವಾನ

0

ಬೆಳ್ತಂಗಡಿ: ಕೃಷಿ ಇಲಾಖೆಯಿಂದ ಶೇ.90 ಮತ್ತು ಶೇ 50ರ ಸಹಾಯಧನದಲ್ಲಿ ವಿವಿಧ ಬಗೆಯ ಯಂತ್ರೋಪಕರಣಗಳ (Agriculture machinery) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ರೈತರು ತಮಗೆ ಅವಶ್ಯವಿರುವ ಯಂತ್ರೋಪಕರಣಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಯಂತ್ರೋಪಕರಣಗಳನ್ನು ಪಡೆದುಕೊಳ್ಳಬಹುದು.

ಸಬ್ಸಿಡಿ ವಿವರ: ಎಲ್ಲಾ ವರ್ಗದ ರೈತರು SMAM ಯೋಜನೆಯಡಿ (Agriculture machoaery susbsidy yojana), ಪಡೆಯಲು ಈ ಕೆಳಗಿನ ಉಪಕರಣಗಳನ್ನು ಸಾಮಾನ್ಯ ರೈತರು ಶೇ.50ರ ಸಬ್ಸಿಡಿ ಪಡೆಯಬಹುದು. ಪ.ಜಾತಿ, ಪ.ಪಂಗಡದ ರೈತರಿಗೆ ಶೇ.90 ರವರೆಗೆ (ಕೆಲವು ಮಿತಿಗೊಳಪಟ್ಟು )ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ಪಡೆಯಬಹುದು.

ಸಬ್ಸಿಡಿಯಲ್ಲಿ ದೊರೆಯುವ ಯಂತ್ರೋಪಕರಣಗಳು: ಕಳೆ ಕತ್ತರಿಸುವ ಯಂತ್ರ, ಅಗೆತ ಮಾಡುವ ಯಂತ್ರ / ರೋಟರಿ ಪವರ್ವೀಡರ್, ಮೇವು ಕತ್ತರಿಸುವ ಯಂತ್ರ, ಔಷಧಿ ಸಿಂಪಡಣೆಗೆ HTP spryayers, ಪವರ್ ಟಿಲ್ಲರ್, ಟ್ರ್ಯಾಕ್ಟರ್

ಟ್ರಾಕ್ಟರ್ ಉಪಕರಣಗಳು: ಯಂತ್ರ ಚಾಲಿತ ಕೈಗಾಡಿ (Load cart)

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು: ಅರ್ಜಿದಾರರ ಪೋಟೋ-1, ಆಧಾ‌ರ್ ಕಾರ್ಡ್‌ಪ್ರತಿ, ಹಿಡುವಳಿ ಪ್ರಮಾಣ ಪತ್ರ(RTC), ಖಾತಾ ಪ್ರತಿ, ಜಾತಿ ಪ್ರಮಾಣ ಪತ್ರ (ಪ.ಜಾತಿ/ಪ.ಪಂಗಡದ ರೈತರಿಗೆ ಮಾತ್ರ ), ಬ್ಯಾಂಕ್‌ ಪಾಸ್‌ಬುಕ್ ಜೆರಾಕ್ಸ್ ಪ್ರತಿ.

ಹೆಚ್ಚಿನ ಮಾಹಿತಿಗಾಗಿ ಬೆಳ್ತಂಗಡಿ ಇಕೋ ಪ್ರೆಸ್ ಎಂಟರ್ ಪ್ರೈಸಸ್ ಹಾಗೂ ಪುತ್ತೂರು ಇಕೋ ಪ್ರೆಸ್ ಎಂಟರ್ ಪ್ರೈಸಸ್ ಪ್ರತಿ ನಿಧಿ ಅಥವಾ ಮೊಬೈಲ್ 8618010550/9113959854 ಸಂಪರ್ಕಿಸುವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

p>

LEAVE A REPLY

Please enter your comment!
Please enter your name here