ಉಜಿರೆ: ಎಸ್‌.ಡಿ.ಯಂ ಇಂಜಿನಿಯರಿಂಗ್‌ ಕಾಲೇಜಿನ ವತಿಯಿಂದ ವಾರ್ಷಿಕ ಎನ್.ಎಸ್.ಎಸ್ ಶಿಬಿರ

0

ಉಜಿರೆ: ಎಸ್‌.ಡಿ.ಯಂ ಇಂಜಿನಿಯರಿಂಗ್‌ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ಫೆ.24ರಿಂದ ಮಾ.1ರವರೆಗೆ ಕಲ್ಮಂಜ ಪಜಿರಡ್ಕದ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಯಿತು.

ಶಿಬಿರವನ್ನು  ಕಲ್ಮಂಜ ಗ್ರಾ.ಪಂ ಅಧ್ಯಕ್ಷೆ ವಿಮಲಾ ಗೌಡ ಉದ್ಘಾಟಿಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಪಜೀರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ನಿರ್ದೇಶಕ ನಾಗಶಯನ ರಾವ್, ಕಲ್ಮಂಜ ರವರು ಶುಭಹಾರೈಸಿದರು.   

ಶಿಬಿರದಲ್ಲಿ ಪ್ರತಿ ದಿನ ಶ್ರಮದಾನದ ಜೊತೆಗೆ ಮಾಹಿತಿ ಸಭೆ, ಸಾಮಾಜಿಕ ಜಾಗೃತಿ  ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಉಜಿರೆಯ ಎಸ್‌.ಡಿ.ಯಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಶಿಬಿರಾರ್ಥಿಗಳ ಆರೋಗ್ಯ ತಪಾಸಣೆಯನ್ನು ಆಯೋಜಿಸಲಾಗಿತ್ತು.

ಶಿಬಿರದ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ  ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಗತಿಪರ ಕೃಷಿಕ, ಶ್ರೀ ಪರಾರಿ ವೆಂಕಟರಮಣ ಹೆಬ್ಬಾರ್ ಮತ್ತು ದೇವಸ್ಥಾನದ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ತುಕಾರಾಂ ಸಾಲಿಯಾನ್ ಸ್ವಯಂ ಸೇವಕರನ್ನು ಅಭಿನಂದಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಎನ್ ಎಸ್ ಎಸ್ ಅಧಿಕಾರಿ  ಮಹೇಶ್ ಪಾಟೀಲ್‌ ಮತ್ತು  ಜಗದೀಶ ಎಂ, ವಿದ್ಯಾರ್ಥಿ ಮುಖಂಡ ಶ್ರೇಯಸ್ ಗೌಡ ಇವರ ನೇತೃತ್ವದಲ್ಲಿ ಶಿಬಿರವನ್ನು ನಡೆಸಲಾಯಿತು.ಒಟ್ಟು 50 ಎನ್‌ಎಸ್‌ಎಸ್ ವಿದ್ಯಾರ್ಥಿ ಸ್ವಯಂಸೇವಕರು ಭಾಗವಹಿಸಿದ್ದರು.

p>

LEAVE A REPLY

Please enter your comment!
Please enter your name here