ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 2023-24ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಲಾಯಿಲ, ಪಡ್ಲಾಡಿಯಲ್ಲಿ ಮಾ.02ರಿಂದ ಮಾ.08ರವರೆಗೆ ಆಯೋಜಿಲಾಗಿದೆ.
ಮಾ.02ರಂದು ಬೆಳಗ್ಗೆ 9.30ಕ್ಕೆ ಗ್ರಾಮ ಪಂಚಾಯತ್ ಲಾಯಿಲ ಪರಿಸರದಿಂದ ಲಾಯಿಲ ಪಡ್ಲಾಡಿಯವರೆಗೆ ‘ಒಂದು ದೇಶ ಒಂದು ಸಂವಿಧಾನ’ ಸಂವಿಧಾನದ ಮಹತ್ವದ ಬಗ್ಗೆ ಹಾಗೂ ‘ಮತದಾನದ ಜಾಗೃತಿ’ ಬಗ್ಗೆ ಜಾಥಾವನ್ನು ಹಮಿಕೊಳ್ಳಲಾಯಿತು.ಜಾಥಾ ಸಮಯದಲ್ಲಿ ಸ್ಥಳೀಯ ಮನೆಗಳಿಗೆ ಕರ ಪತ್ರಗಳನ್ನು ನೀಡಲಾಯಿತು.ಬೆಳಗ್ಗೆ 11.00ಗಂಟೆಯಿಂದ 1.00ಗಂಟೆಯವರೆಗೆ ಪಡ್ಲಾಡಿ ಪರಿಸರದಲ್ಲಿ ಗ್ರಾಮ ಸಮೀಕ್ಷೆಯನ್ನು ನಡೆಸಲಾಯಿತು.
ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಿಬಿರವನ್ನು ಉದ್ಘಾಟಿಸಿದರು.
ಶಿಬಿರದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳೊಂದಿಗೆ ವ್ಯಕ್ತಿತ್ವ ವಿಕಸನ ಹೊಂದಲು ಸಹಕಾರಿ ಎಂದರು. ಅತಿಥಿಗಳಾದ ವಾರಿಜ, ಸಿ ಆರ್.ಪಿ. ಬೆಳ್ತಂಗಡಿ ಇವರು, ವಿಧ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಸಿಕೊಳ್ಳಲು ಎನ್.ಎಸ್.ಎಸ್ ಒಂದು ಉತ್ತಮವಾದ ವೇದಿಕೆ ಎಂದರು.
ಸ್ಥಳೀಯ ನಿರಂಜನ್ ಜೈನ್ ಕೃಷಿಕರು ಪುದ್ದೊಟ್ಟುಗುತ್ತು ಹಾಗೂ ಜಯಂತಿ ಅನ್ನಡ್ಕ ಸದಸ್ಯರು ಗ್ರಾಮ ಪಂಚಾಯತ್ ಲಾಯಿಲ ಇವರು ಶಿಬಿರಕ್ಕೆ ಶುಭ ಕೋರಿದರು.ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ ರವರು ಶಿಬಿರಕ್ಕೆ ಚಾಲನೆ ನೀಡಿದರು.ಲಾಯಿಲ ಪಡ್ಲಾಡಿ ದ.ಕ.ಜಿ.ಪಂ ಹಿ.ಪ್ರಾ ಶಾಲೆ ಮುಖ್ಯೋಪಾಧ್ಯಯಿನಿ ರಾಜೇಶ್ವರಿ ಬಿ.ಎಸ್, ಎಸ್ ಡಿ.ಎಂ.ಸಿ ಅಧ್ಯಕ್ಷ ಸೂರಪ್ಪ, ಲಾಯಿಲ ಪಡ್ಲಾಡಿ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷೆ ಜಯಂತಿ, ಪಡ್ಲಾಡಿ ಶಾಲೆ ಬೆನೆಡಿಕ್ಟ್ ಸಲ್ದಾನ ಆಶಾ, ಗ್ರಾ.ಪಂ ಸದಸ್ಯರು ಲಾಯಿಲ ಹಾಗೂ ಯೋಗೀಶ್ ಬಿ. ಸಹ ಶಿಕ್ಷಕರು, ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಲಾಯಿಲ, ಪಡ್ಲಾಡಿ ಇವರು ವೇದಿಕೆಯಲ್ಲಿದ್ದು ಶಿಬಿರಕ್ಕೆ ಶುಭಕೋರಿದರು.
ರಾ.ಸೇ ಯೋಜನಾಧಿಕಾರಿಯಾದ ಪ್ರೊ.ರೊನಾಲ್ಡ್ ಪ್ರವೀಣ್ ಕೊರೆಯ ಇವರು ಪ್ರಾಸ್ತಾವಿಕವಾಗಿ ಮಾತಾಡಿದರು.
ಪ್ರೊ ಕವಿತ ರಾ.ಸೇ.ಯೋಜನಾಧಿಕಾರಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂದೇಶ್ ಎಂ.ಎನ್. ಪ್ರಥಮ ಬಿ.ಬಿ.ಎ ಸ್ವಾಗತಿಸಿದರು.ಶರತ್ ಪ್ರಥಮ ಬಿ.ಎ ವಂದಿಸಿದರು.
ಕುಮಾರಿ ಪ್ರತೀಕ್ಷಾ ದ್ವಿತೀಯ ಬಿ.ಬಿ.ಎ ನಿರೂಪಿಸಿದರು. ಸುರೇಶ್ ಡಿ ಆಂಗ್ಲ ಭಾಷಾ ಉಪನ್ಯಾಸಕರು ಹಾಗೂ ಸಹ ಶಿಬಿರಾಧಿಕಾರಿಗಳು ಸಂಘಟಿಸಿದರು.