ನಾರ್ಯ ಪರಿಸರದಲ್ಲಿ ರಾತ್ರಿ ಒಂಟಿ ಸಲಗ ಪ್ರತ್ಯಕ್ಷ- ಕೃಷಿಗೆ ಹಾನಿ- ಭಯ ಬೀತಗೊಂಡ ಜನತೆ

0

ಧರ್ಮಸ್ಥಳ: ನಾರ್ಯ, ಕಲ್ಕಾಜೆ, ಎರ್ಮಾಳ, ನಾರ್ಯ, ದೊಂಡೋಲೆ, ಪುದುವೆಟ್ಟು ಪರಿಸರದಲ್ಲಿ ಮಾ.05ರಂದು ಬೆಳಗ್ಗಿನ ಜಾವ ನರೇಶ್ ಮತ್ತು ಮನೋಜ್ ಹಾಗೂ ಹರೀಶ್ ಗೌಡ ಇವರ ತೋಟದಲ್ಲಿ ಒಂಟಿ ಸಲಗ ಬಾಳೆ ಗಿಡ ಮತ್ತು ಕೃಷಿಗೆ ಹಾನಿ ಮಾಡಿ ಮಾಡಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಮುಂಜಾನೆ ಸರಿಸುಮಾರು ಎರಡು ಗಂಟೆ ಹೊತ್ತಿಗೆ ಬಾರಿ ಗಾತ್ರದ ಸದ್ದನ್ನು ಮಾಡಿದ್ದು ನಾಯಿಗಳು ಬೊಬ್ಬೆ ಹೊಡೆದಿವೆ ಇದನ್ನು ತಿಳಿದ ಮನೆಯವರು ಊರಿನವರೆಗೆ ಜಾಗರೂಕತರಾಗಿ ಎಂದು ಫೋನ್ ಕರೆಯ ಮೂಲಕ ಮತ್ತು ವಾಟ್ಸಪ್ ಸಂದೇಶದ ಮೂಲಕ ತಿಳಿಸಿದ್ದಾರೆ.

ಮಾ.4ರಂದು ಆನೆಯು ಧರ್ಮಸ್ಥಳದ ಪಾಂಗಳ ಮತ್ತು ಅಂಬ್ಯದಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಪಟಾಕಿ ಶಬ್ದಕ್ಕೆ ಭಯಗೊಂಡು ಪಯಣ ಬೆಳೆಸಿದ ಆನೆ ಈ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.

p>

LEAVE A REPLY

Please enter your comment!
Please enter your name here