ಕಣಿಯೂರು: ಇಲ್ಲಿಯ ಗ್ರಾಮ ಪಂಚಾಯಿತಿಯಲ್ಲಿ.ವಿಕಲಚೇತನರ ಸಮನ್ವಯ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ಯಶವಂತ ಕಾರಿಂಜ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಉಪಾಧ್ಯಕ್ಷೆ ಜಾನಕಿ, ಸದಸ್ಯರಾದ ಯಶೋದರ ಶೆಟ್ಟಿ, ಸೀತಾರಾಮ ಮಡಿವಾಳ, ಗಾಯತ್ರಿ, ಸುಮತಿ, ಮೋಹಿನಿ, ಜಲಜಾಕ್ಷಿ, ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ಕೀರ್ತನ್ ಕೊಯ್ಯೂರು, ರಂಜಿತ್ ಶಿಬಾಜೆ, ಪಂ ಸಿಬ್ಬಂದಿಗಳಾದ ಪ್ರದೀಪ್ ಲಕ್ಷ್ಮಿ, ಉಮೇಶ್, ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಶಾಂತ್ ಉಪಸ್ಥಿತರಿದ್ದರು.
ತಾಲೂಕು ಮೇಲ್ವಿಚಾರಕ ಜೊನ್ ಬ್ಯಾಪ್ಟಿಸ್, ವಿಶೇಷ ಚೇತನರಿಗೆ ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ವತಿಯಿಂದ ಆಯ್ದ ಮೂರು ಮಂದಿ ವಿಶೇಷ ಚೇತನರಿಗೆ ಗಾಳಿ ಕುರ್ಚಿಯನ್ನು ನೀಡಲಾಯಿತು.ಮಾರುತಿಪುರ ಆಹಾರೋಧ್ಯಮದ ಸಹಕಾರದೊಂದಿಗೆ 50 ಮಂದಿ ವಿಶೇಷ ಚೇತನರಿಗೆ ಅಕ್ಕಿ ವಿತರಣೆ ನಡೆಸಲಾಯಿತು.
ಇಬ್ಬರು ವಿಶೇಷ ಚೇತನರಿಗೆ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು.
ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾದ ಕಣಿಯೂರು ಗ್ರಾ.ಪಂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಚಿರಂಜೀವಿ ಯವರನ್ನು ಸನ್ಮಾನಿಸಲಾಯಿತು.
ಪಂಚಾಯತ್ ಕಾರ್ಯದರ್ಶಿ ರಮೇಶ್ ಕೆ ಸ್ವಾಗತಿಸಿದರು.ಹೀರಣ್ಣ ಬೇಳಾಲ್ ರವರು ಕಾರ್ಯಕ್ರಮ ನಿರೂಪಿಸಿದರು.ಸಂಜೀವಿನಿ ರತ್ನಾವತಿಯವರು ಧನ್ಯವಾದ ಸಲ್ಲಿಸಿದರು.