ಉಜಿರೆ ಅನುಗ್ರಹ ಶಾಲೆಯಲ್ಲಿ ಇ.ಸಿ.ಎ ಡೇ-2024 ಕಾರ್ಯಕ್ರಮ

0

ಉಜಿರೆ: ಮಕ್ಕಳಿಗೆ ಪಾಠದ ಜೊತೆಗೆ ನೀಡುವ ಪಠ್ಯೇತರ ಚಟುವಟಿಕೆಗಳ ಪ್ರದರ್ಶನದ ‘ಇ.ಸಿ.ಎ ಡೇ 2024’ ಕಾರ್ಯಕ್ರಮವು ಶಾಲಾ ಸಂಚಾಲಕರಾದ ವಂ.ಫಾ.ಜೇಮ್ಸ್ ಡಿಸೋಜರವರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಭವನದಲ್ಲಿ ಅತ್ಯಂತ ಆಕರ್ಷಣೀಯವಾಗಿ ನಡೆಯಿತು.

ತಬ್ಲಾ, ಹಾರ್ಮೋನಿಯಂ, ಕೊಳಲು, ಭರತನಾಟ್ಯ, ಸುಗಮ -ಶಾಸ್ತ್ರೀಯ ಸಂಗೀತ, ಕಸೂತಿ ಕೆಲಸಗಳು, ಕರಾಟೆ, ವೆಸ್ಟರ್ನ್ ಮತ್ತು ಫಿಲ್ಮಿ ಡ್ಯಾನ್ಸ್ ಗಳನ್ನು ವಾರಕ್ಕೊಮ್ಮೆ ಏಕಕಾಲದಲ್ಲಿ ಆಯಾ ವಿಷಯಗಳ ನುರಿತ ಶಿಕ್ಷಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಕಲಿಸುವ ತರಗತಿ ಇದಾಗಿದ್ದು ಇವುಗಳ ವಾರ್ಷಿಕ ಪ್ರದರ್ಶನವೇ ‘ ಇ.ಸಿ.ಎ ಡೇ’. ಮಕ್ಕಳ ಪ್ರಾರ್ಥನೆಯ ಬಳಿಕ ಪ್ರಭಾಕರ ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು.

ಸಂಚಾಲಕರು, ಪ್ರಾಂಶುಪಾಲರು ಹಾಗೂ ಎಲ್ಲಾ ಇ.ಸಿ.ಎ ಶಿಕ್ಷಕರ ಜೊತೆಗೂಡಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ವಂ.ಫಾ.ವಿಜಯ್ ಲೋಬೋ ರವರು ಕಾರ್ಯಕ್ರಮದ ಮಹತ್ವವನ್ನು ತಿಳಿಸಿ ಶುಭಕೋರಿದರು.

ಅದ್ಯಕ್ಷೀಯ ಭಾಷಣ ನೀಡಿದ ಶಾಲಾ ಸಂಚಾಲಕರು ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು.ವೇದಿಕೆಯಲ್ಲಿ ಎಲ್ಲಾ ಇ.ಸಿ.ಎ ಶಿಕ್ಷಕರು ಉಪಸ್ಥಿತರಿದ್ದರು.

ಪ್ರಭಾಕರ ಶೆಟ್ಟಿ ಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮಗಳು ಜರಗಿದವು.

p>

LEAVE A REPLY

Please enter your comment!
Please enter your name here