ವೇಣೂರು: 2024ರ ಐತಿಹಾಸಿಕ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಇಂದು ಮುನಿವರ್ಯರ ಪಾದಸ್ಪರ್ಶವಾಗಿದೆ.
ಫೆ.22ರಿಂದ 9 ದಿನಗಳ ಕಾಲ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ ದಿವ್ಯ ಸಾನಿಧ್ಯ ನೀಡಲಿರುವ ಪರಮ ಪೂಜ್ಯ 108 ಅಮೋಘಕೀರ್ತಿ ಮಹಾರಾಜರು ಮತ್ತು ಪರಮಪೂಜ್ಯ 108 ಶ್ರೀ ಅಮರಕೀರ್ತಿ ಮಹಾರಾಜರು ಅವರನ್ನು ಇಂದು ಭವ್ಯ ಮೇರವಣಿಗೆಯಲ್ಲಿ ವೇಣೂರಿಗೆ ಭಕ್ತಿ ಸಡಗರದಿಂದ ಬರಮಾಡಿಕೊಳ್ಳಲಾಯಿತು.
ಮಹೋತ್ಸವ ಸಮಿತಿ ಕಾರ್ಯಧ್ಯಕ್ಷರಾದ ಅಳದಂಗಡಿ ಅರಮನೆಯ ಅರಸರು ಡಾ.ಪದ್ಮಪ್ರಸಾದ ಅಜಿಲರು, ಸಮಿತಿ ಪ್ರಧಾನ ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ, ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ನೂರಾರು ಮಂದಿ ಶ್ರಾವಕ ಶ್ರಾವಕಿಯರು ಮೆರವಣಿಗೆಯಲ್ಲಿ ಇದ್ದರು.
ವೇಣೂರು ಚರ್ಚ್ ಬಳಿಯಿಂದ ಪೂಜ್ಯರುಗಳನ್ನು ಭಕ್ತಿಯಿಂದ ಸ್ವಾಗತಿಸಿ ಕರೆ ತರಲಾಯಿತು.
p>