ಬಳಂಜ ಶಾಲಾ 75 ರ ಸಂಭ್ರಮಾಚರಣೆ ಪ್ರಯುಕ್ತ ಚಿಂತನಾ ಕಾರ್ಯಗಾರ-ಸರಕಾರಿ ಶಾಲೆ ಊರಿನ ದೇವಾಲಯವಿದ್ದಂತೆ: ಮೋಹನ್ ಕುಮಾರ್

0

ಬೆಳ್ತಂಗಡಿ: ಶಿಕ್ಷಣ ಸಂಸ್ಥೆ ಎಂಬುದು ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರ.ಅದರಲ್ಲು ಸರಕಾರಿ ಶಾಲೆಯೆಂದರೆ ಊರಿನ ದೇವಾಲಯವಿದ್ದಂತೆ.ಇಲ್ಲಿ ಅನೇಕ ಬಡ ಕುಟುಂಬದ ಮಕ್ಕಳ ಭವಿಷ್ಯರೂಪಿಸುವ ಕೇಂದ್ರವಾಗಿದೆ.75 ವರ್ಷಗಳ ಹಿಂದೆ ಈ ಬಾಗದ ಮಕ್ಕಳು ಶಿಕ್ಷಣ ಪಡೆಯಬೇಕು ಎಂದು ಹಿರಿಯರು ಶಾಲೆ ಪ್ರಾರಂಬಿಸಿದ್ದು ಅಂತಹ ಮಹನೀಯರಿಗೆ ಗೌರವ ಸಲ್ಲಿಸಲು 75 ರ ಸಂಭ್ರಮ ಅರ್ಥಪೂರ್ಣ ಆಚರಿಸಲು ಮುಂದಾಗಿದ್ದು ಅಬಿನಂದನೀಯ.ಇದಕ್ಕೆ ಎಲ್ಲರು ಕೈಜೋಡಿಸಬೇಕು ಎಂದು ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.

ಅವರು ಫೆ.18ರಂದು ಸ.ಉ.ಪ್ರಾ ಹಾಗೂ ಪ್ರೌಢಶಾಲೆ ಬಳಂಜ ಇದರ 75 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಶಾರದಾ ಕಲಾ ಮಂದಿರದಲ್ಲಿ ನಡೆದ ಚಿಂತನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಬಾಗದ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ.ಬದುಕು ಕಟ್ಟೋಣ ತಂಡ ಈಗಾಗಲೆ ಐದು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದು ಇದಕ್ಕೆ ರೋಟರಿ ಕ್ಲಬ್ ಬೆಳ್ತಂಗಡಿ ಸಹಕಾರ ನೀಡುತ್ತಿದೆ.ಬಳಂಜ ಶಾಲಾ ಅಬಿವ್ರುದ್ದಿಗೆ ಕೈಜೋಡಿಸುವುದಾಗಿ ತಿಳಿಸಿದರು.

ಶಾಲಾ ನೂತನ ಕಟ್ಟಡದ ನೀಲಿ ನಕಾಶೆಯನ್ನು ಅನಾವರಣಗೊಳಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ಅದ್ಯಕ್ಷ ಅನಂತಭಟ್ ಮಚ್ಚಿಮಲೆ ಮಾತನಾಡಿ ಸರಕಾರಿ ಶಾಲೆಗಳ ಅಬಿವ್ರುದ್ದಿಗೆ ಸಂಘ ಸಂಸ್ಥೆಗಳು ನೆರವು ನೀಡಲು ಮುಂದೆ ಬರುತ್ತಿದ್ದು ಇದನ್ನು ಪಡೆದುಕೊಳ್ಳುವ ಉತ್ತಮ ಸಂಘಟನೆ ಬೇಕು.ಇದರಿಂದ ಸರಕಾರಿ ಶಾಲೆಗಳು ಬೆಳಗುತ್ತದೆ.ಇಂತಹ ಸಂಘಟನೆ ಬಳಂಜದಲ್ಲಿದ್ದು ಇಂತಹ ಸಂಘಟನೆಯೊಂದಿಗೆ ಎಲ್ಲರು ಕೈಜೋಡಿಸಿ ಬಳಂಜ ಶಾಲೆಯನ್ನು ಮಾದರಿಯಾಗಿಸಬೇಕು.ರೋಟರಿ ಸಂಸ್ಥೆ ಕೂಡ ಅಬಿವ್ರುದ್ದಿಯಲ್ಲಿ ಕೈಜೋಡಿಸಲಿದೆ ಎಂದರು.

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷ ಚೈತ್ರೇಶ್ ಇಳಂತಿಲ ಮುಖ್ಯ ಆಥಿತಿಯಾಗಿ ಮಾತನಾಡಿ ಗ್ರಾಮೀಣ ‌ಬಾಗದ ಮಕ್ಕಳಿಗೆ ಉತ್ತಮ ವಾತಾವರಣದೊಂದಿಗೆ ಗುಣ ಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಬಳಂಜದ ಶಿಕ್ಷಣ ಪ್ರೇಮಿಗಳ ಕಲ್ಪನೆ ಅಭಿನಂದನೀಯ.ಇದಕ್ಕೆ ಪತ್ರಕರ್ತರ ಸಂಘವೂ ಜೊತೆಯಾಗಲಿದೆ ಎಂದರು.

ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕಾರ್ಕಳ ಮಾತನಾಡಿ ಸರಕಾರಿ ಶಾಲೆಯೆಂದರೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರ.ಇದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ.ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ಹಳೆ ವಿದ್ಯಾರ್ಥಿಗಳು ಮುಂದಾಗಬೇಕು.ತಾನು ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ನೀಡುವ ಸಂಕಲ್ಪಮಾಡಬೇಕು ಎಂದರು.ಶಾಲೆಯೊಳಗಿನ‌ ವ್ಯವಸ್ಥೆಯಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಡಿ ಎಂದರು.

ಅಮೃತ ಮಹೋತ್ಸವ ಸಮಿತಿಯ ಗೌರವ ಮಾರ್ಗದರ್ಶಕರಾದ ಹೆಚ್ ದರ್ಣಪ್ಪ ಪೂಜಾರಿ ಟ್ರಸ್ಟ್ ನ ಲೋಗೊ ಅನಾವರಣ ಗೊಳಿಸಿ ಶುಭಹಾರೈಸಿದರು.

ಅಮೃತ ಮಹೋತ್ಸವದ ಗೌರವ ಮಾರ್ಗದರ್ಶಕರಾದ ಕೆ ವಸಂತ ಸಾಲಿಯಾನ್ ಅದ್ಯಕ್ಷತೆ ವಹಿಸಿದ್ದರು.ಬಳಂಜ ಗ್ರಾ ಪಂ ಅಧ್ಯಕ್ಷೆ ಶೋಬಾ ಕುಲಾಲ್, ಶಾಲಾಭಿವೃದ್ಧಿ ಸಮಿತಿ ಅದ್ಯಕ್ಷ ರತ್ನಾಕರ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಸ.ಪ್ರೌ ಶಾಲಾ ಮುಖ್ಯೋಪಾದ್ಯಾಯಿನಿ ಸುಲೋಚನಾ ಕೆ, ಸ.ಪ್ರಾ.ಉ.ಹಿ ಪ್ರಾ ಶಾಲಾ ಮುಖ್ಯೋಪಾಧ್ಯಾಯಿನಿ ರೆನಿಲ್ಡಾ ಜೋಸ್ ಮಥಾಯಸ್ ಉಪಸ್ಥಿತರಿದ್ದರು.

ಅಮೃತ ಮಹೋತ್ಸವ ಸಮಿತಿ ಅದ್ಯಕ್ಷ ಚಂದ್ರಶೇಖರ ಪಿ.ಕೆ ಸ್ವಾಗತಿಸಿದರು.ಬಳಂಜ ಶಿಕ್ಷಣ ಟ್ರಸ್ಟ್ ರಿ ಅದ್ಯಕ್ಷ ಮನೋಹರ್ ಬಳಂಜ ಪ್ರಾಸ್ತಾವಿಕ ಮಾತನಾಡಿದರು.ಬಹುಮುಖ ಪ್ರತಿಭೆ ಚಂದ್ರಹಾಸ್ ಬಳಂಜ ನಿರೂಪಿಸಿ ವಂದಿಸಿದರು.

p>

LEAVE A REPLY

Please enter your comment!
Please enter your name here