ಉರುವಾಲು: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಕುಪ್ಪೆಟ್ಟಿ ಗಣೇಶ ಭಜನಾ ಮಂದಿರದಿಂದ ದೇವಸ್ಥಾನದವರೆಗೆ ಹಸಿರು ಹೊರೆಕಾಣಿಕೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆಫೆ.16ರಂದು ಸರ್ಮಪಿಸಲಾಯಿತು.
ಹಸಿರು ಹೊರೆಕಾಣಿಕೆಗೆ ಕುಪ್ಪೆಟ್ಟಿ ಭಜನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಕುಪ್ಪೆಟ್ಟಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದ್ವಾರದ ಬಳಿ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಕೋಡಿಯಡ್ಕ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರಸನ್ನ ದರ್ಬೆ, ಚಾಲನೆ ನೀಡಿದರು.
ಭವ್ಯ ಮೆರವಣಿಗೆ:
ಉರವಾಲು, ಕಣಿಯೂರು, ಬಂದಾರು, ಮೊಗ್ರು, ಇಳಂತಿಲ, ತೆಕ್ಕಾರು, ಕರಾಯ, ಬಾರ್ಯ, ತಣ್ಣೀರುಪಂತ, ಪುತ್ತಿಲ, ನಾಳ, ಮಚ್ಚಿನ, ಉಪ್ಪಿನಂಗಡಿ ಸಹಿತ ವಿವಿಧೆಡೆಯಿಂದ ಭಕ್ತರು ಅಡಿಕೆ, ತೆಂಗಿನಕಾಯಿ, ಬಾಳೆಗೊನೆ, ತರಕಾರಿ ಇನ್ನಿತರ ವಸ್ತುಗಳನ್ನು ಸಮರ್ಪಿಸಿದರು.ಮೆರವಣಿಗೆಯಲ್ಲಿ ಚೆಂಡೆ, ಹುಲಿ ವೇಷ, ನಾಸಿಕ್ ಬ್ಯಾಂಡ್, ವಿವಿಧ ವೇಷಗಳು ಆಕರ್ಷಣೀಯವಾಗಿತ್ತು. ದಾರಿಯುದ್ದಕ್ಕೂ ಪಾನೀಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.
ಆಡಳಿತ ಸಮಿತಿಯ ಗೌರವಾಧ್ಯಕ್ಷ ದಿನಕರ ಪೂಜಾರಿ ಕಡ್ತಿಲ, ಪವಿತ್ರ ಪ್ರಾಣಿ ಹರೀಶ್ ತಾಳಿಂಜ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುನಿಲ್ ಗೌಡ ಅಣವು, ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮ್ ಭಟ್ ವಾದ್ಯಕೋಡಿ, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಕಲ್ಲಳಿಕೆ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಪೂಜಾರಿ ಕಡ್ತಿಲ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಉದಯ ಟಿ.ತಾಳಿಂಜ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಶ್ರೀಧರ್ ಭಟ್ ಕೂವೆಂತ್ತಂಡ ಹಾಗೂ ಸುಂದರ ಶೆಟ್ಟಿ ಎಂಜಿರಪಲ್ಕೆ, ಆರ್ಥಿಕ ಸಮಿತಿ ಸಂಚಾಲಕ ಪ್ರಭಾಕರ ಗೌಡ ಪೊಸದೊಂಡಿ ಹಾಗೂ ಹೊರೆ ಕಾಣಿಕೆ ಸಮಿತಿ ಸಂಚಾಲಕ ಪ್ರವೀಣ್ ರೈ ಉಪಸ್ಥಿತರಿದ್ದರು.
ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರ: