ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಉಜಿರೆ ಸಂಸ್ಕರಣ ಸಹಕಾರಿ ಸಂಘಕ್ಕೆ ಅಪೋಲೋ ಗೋಲ್ಡ್ ಪಾರ್ಟ್ನರ್ ಅವಾರ್ಡ್ 

0

ಉಜಿರೆ: ಫೆ.07ರಂದು ಜಾಗತಿಕ ಟಯರ್ ಉತ್ಪಾದಕ ಕಂಪನಿ ಅಪೋಲೋ ಟಯರ್ಸ್ ಲಿ. ಇದರ ನೈಸರ್ಗಿಕ ರಬ್ಬರು ಪೂರೈಕೆದಾರರ ಸಮಾವೇಶ (‘Natural Rubber Partners’ Summit 2024’) ಕೇರಳ ರಾಜ್ಯದ ಕೊಚ್ಚಿಯಲ್ಲಿ ನಡೆಯಿತು. ಸಮಾವೇಶದಲ್ಲಿ ಕರ್ನಾಟಕದ ಅತೀ ದೊಡ್ಡ ನೈಸರ್ಗಿಕ ರಬ್ಬರು ಪೂರೈಕೆದಾರ ಸಂಸ್ಥೆ ಉಜಿರೆಯ ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ (ನಿ.) ಕ್ಕೆ ಅಪೋಲೋ ಗೋಲ್ಡ್ ಪಾರ್ಟ್ನರ್ ಅವಾರ್ಡ್- ಸ್ಟೇಟ್ ಚಾಂಪಿಯನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಇವರು ಸಮ್ಮೇಳನದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು.

ಅಪೋಲೋ ಟಯರ್ಸ್ ಗ್ರೂಪ್ ಹೆಡ್ ಗ್ಲೋಬಲ್ ಕೋರ್ಪೊರೇಟ್ ಪ್ರೊಕ್ಯೊರ್ಮೆಂಟ್ ಪ್ರವೀಣ್ ತ್ರಿಪಾಟಿ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಡೇನಿಯಲ್, ಚೀಫ್ ಟೆಕ್ನೊಲಾಜಿ ಆಫೀಸರ್ ಅಪೋಲೋ ಟೈಯರ್ಸ್ ಗ್ಲೋಬಲ್ ಆರ್ ಮತ್ತು ಡಿ ಮತ್ತು ಗ್ರೂಪ್ ಹೆಡ್ ಟೆಕ್ನೊಲಾಜಿ ಆಫೀಸರ್ ಅಪೋಲೋ ಟೈಯರ್ಸ್ ಆರ್ ಮತ್ತು ಡಿ, ಏಷಿಯಾ ಅಮರನಾಥ್ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here