


ಬೆಳ್ತಂಗಡಿ: ಗೇರುಕಟ್ಟೆ ಕೊರಂಜದಲ್ಲಿರುವ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.10ರಂದು ಮಕ್ಕಳ ಮೆಟ್ರಿಕ್ ಮೇಳ ನಡೆಯಿತು.ಮುಖ್ಯೋಪಾಧ್ಯಾಯಿನಿ ಶಾಂತ ಕಾರ್ಯಕ್ರಮ ಉದ್ಘಾಟಿಸಿದರು.



ಗಣಿತದ ಪರಿಕಲ್ಪನೆಗಳನ್ನು ದೈನಂದಿನ ಜೀವನಕ್ಕೆ ಅನ್ವಯಿಸಿದಾಗ ಕಲಿಕೆಯಲ್ಲಿ ಉತ್ಸಾಹ ಹಾಗೂ ಆಸಕ್ತಿ ಉಂಟಾಗುವುದು ಎಂಬ ಹಿನ್ನೆಲೆಯಲ್ಲಿ ಮೆಟ್ರಿಕ್ ಮೇಳ ಆಯೋಜಿಸಲಾಗಿತ್ತು.

ಊರ ಸೊಪ್ಪು, ತರಕಾರಿ, ಹಣ್ಣು ಹಂಪಲು, ಬೇಳೆ ಕಾಳು, ತರಕಾರಿ ಹೂಗಳ ಬೀಜ, ಗಿಡ, ಚುರುಮುರಿ, ಸ್ವೀಟ್ ಕಾರ್ನ್, ಸಿಹಿ ತಿನಿಸು, ಫ್ರುಟ್‌ಚಾಟ್, ಚಾಟ್ ಐಟಮ್, ನಂದಿನಿ ಉತ್ಪನ್ನ, ಅವಿಲ್ ಮಿಲ್ಕ್, ನೆಲ್ಲಿಕಾಯಿ, ಮಾವಿನಕಾಯಿ, ಹುಣಸೆ ಹುಳಿ ಸಹಿತ ಅನೇಕ ಆಹಾರ ಉತ್ಪನ್ನಗಳು, ಫ್ಯಾನ್ಸಿ ಐಟಮ್‌ಗಳು, ಬಿಸ್ಕಿಟ್ ಚಾಕಲೇಟ್, ಸ್ಟೇಶನರಿ ಐಟಮ್‌ಗಳು ಮತ್ತು ಆಕರ್ಷಣೀಯ ಆಟಗಳು ಮೇಳದಲ್ಲಿ ಗಮನ ಸೆಳೆಯಿತು.


            





