ಬೆಳ್ತಂಗಡಿ: ಸಂವಿಧಾನ ಜಾಗೃತಿ ಜಾಥಾ ರಥ ತಾಲೂಕಿನಾದ್ಯಂತ ಸಂಚರಿಸುತ್ತಿದ್ದು, ಇಂದು ಮೇಲಂತಬೆಟ್ಟು ಗ್ರಾಮ ಪಂಚಾಯತ್ ನಿಂದ ಹೊರಟ ಜಾಥ, ಸಂತೆಕಟ್ಟೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿ ಜಾಥಾ ರಥಕ್ಕೆ ಇಂಧನ ಸಚಿವ ಕೆ.ಜಾರ್ಜ್ ಮಾಲಾರ್ಪಣೆ ಮಾಡಿ ಜಾಥಾಕ್ಕೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು.
ದಕ ಜಿಲ್ಲಾ ಪಂಚಾಯತ್, ಕಂದಾಯ ಇಲಾಖೆ, ತಾಲೂಕು ಪಂಚಾಯತ್, ಪ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಫೆ.11ರಂದು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ಜಾಥಾ ರಥ ತಾಲೂಕು ಆಡಳಿತ ಸೌಧದ ಬಳಿ ಬಂದು ತಲುಪಿತು.
ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಹುಲಿ ವೇಷ, ಇತ್ಯಾದಿ ವೇಷ ಭೂಷಣಗಳನ್ನು ವಿದ್ಯಾರ್ಥಿಗಳು ಧರಿಸಿ ಜಾಥಾದಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಕೆ.ಪಿ ಸಿ.ಸಿ.ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಾಜಿ. ವಿ.ಪ.ಸದಸ್ಯ ಐವನ್ ಡಿಸೋಜಾ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಜೆ. ಆರ್ ಲೋಬೋ , ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರಾದ ರಂಜನ್.ಜಿ.ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ತಹಶೀಲ್ದಾರ್ ಪೃಥ್ವಿ ಸಾನಿಕಂ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ, ತಾ.ಪಂ.ವ್ಯವಸ್ಥಾಪಕ ಪ್ರಶಾಂತ್ ಬಳಂಜ , ಪ.ಪಂ. ಮುಖ್ಯಾಧಿಕಾರಿ ರಾಜೇಶ್ ಕೆ , ತಾ.ಪಂ.ಸಂಯೋಜಕ, ಗೃಹ ರಕ್ಷಕ ದಳ ಘಟಕಧಿಕಾರಿ ಜಯನಂದ್, ಮಾಜಿ ಜಿ.ಪಂ.ಸದಸ್ಯ ಶೇಖರ್ ಕುಕ್ಕೇಡಿ ಹಾಗೂ ದಲಿತ ಸಂಘಟನೆಯ ಮುಖಂಡರು ಹಾಜರಿದ್ದರು.
ಬಳಿಕ ತಾಲೂಕು ಆಡಳಿತ ಸೌಧದ ವಠಾರದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಂವಿಧಾನ ಜಾಗೃತಿ ಜಾಥಾ ಸಹಿ ಅಭಿಯಾನ ನಡೆಸಲಾಯಿತು.