ಹೆಪಾಟೈಟಿಷ್ ಬಿ ಎಂಬ ಲಿವರ್‌ನ ಸಮಸ್ಯೆಯಿಂದ ಬಳಲುತ್ತಿವಿರುವ ಬಳಂಜ ಗ್ರಾ.ಪಂ ಮಾಜಿ ಸದಸ್ಯ ಗುರುರಾಜ್: ಚಿಕಿತ್ಸೆಗೆ ನೆರವಾಗಿ

0

ಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದ ಪೆರೋಡಿತ್ತಾಯ ಕಟ್ಟೆ ಗಿಂಡಾಡಿಯ ನಿವಾಸಿ, ಕ್ರೀಡಾ ಪ್ರೋತ್ಸಾಹಕ, ಬಳಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುರಾಜ್ ಹೆಗ್ಡೆಯವರು ಸುಮಾರು ೨ ವರ್ಷದಿಂದ ಹೆಪಾಟೈಟಿಷ್ ಬಿ ಎಂಬ ಲಿವರ್‌ನ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯ ಮಂಗಳೂರಿನ ಎಜೆ ಆಸ್ಪತ್ರೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಚಿಕಿತ್ಸೆಗಾಗಿ ಈಗಾಗಲೇ ಸುಮಾರು 9 ಲಕ್ಷದಷ್ಟು ಖರ್ಚಾಗಿದ್ದು, ಮುಂದಿನ ಚಿಕಿತ್ಸೆಗೆ ಸುಮಾರು ೪೦ಲಕ್ಷದಷ್ಟು ಹಣದ ಅವಶ್ಯಕತೆ ಇದ್ದು, ಇನ್ನು 15 ದಿನದ ಒಳಗೆ ದೊಡ್ಡ ಮಟ್ಟದ ಚಿಕಿತ್ಸೆ ಆರಂಭ ಮಾಡಬೇಕೆಂದು ವೈದ್ಯರು ತಿಳಿಸಿರುತ್ತಾರೆ.

ಗುರುರಾಜ್ ಹೆಗ್ಡೆಯವರು ಮನೆಯ ಆಧಾರಸ್ತಂಭವಾಗಿದ್ದು, ತಾಯಿ, ಹೆಂಡತಿ ಮತ್ತು ೨ಚಿಕ್ಕ ಮಕ್ಕಳು ಜೊತೆಗಿದ್ದಾರೆ.

ತಾಯಿಯು ಹೃದಯ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಅಷ್ಟೊಂದು ದೊಡ್ಡ ಪ್ರಮಾಣದ ಹಣಕಾಸು ಒಗ್ಗೂಡಿಸಲು ಸಾಧ್ಯವಾಗದ ಕಾರಣ ಈಗ ದಾನಿಗಳ ಮೋರೆ ಹೋಗಿದ್ದಾರೆ.ಸಹೃದಯಿ ದಾನಿಗಳು ಗುರುರಾಜ ಹೆಗ್ಡೆಯವರ ಚಿಕಿತ್ಸೆಗೆ ನೆರವಾಗಿ ಮೊದಲಿನಂತಾಗಲು ಸಹಕರಿಸೋಣ.
ಸಹಾಯ ಮಾಡುವವರು ಈ ನಂಬರ್ ಸಹೃದಯಿ ಸಂಪರ್ಕಿಸಿರಿ: 9845301366

Gururaj Hegde C/o: late sundara hegde 280/1 Gindady house,Belthangady 574217 india, Bank Name: Karnataka bank Ltd Branch: Aladangady. A/c no: 0152500101703601, IFSC code: KARB0000015 MICR code: 575052503 Phone pay or Google pay No: 9845301366

p>

LEAVE A REPLY

Please enter your comment!
Please enter your name here