ಉರುವಾಲು: ಇಲ್ಲಿನ ಭಾರತೀ ವಿದ್ಯಾಸಂಸ್ಥೆ ಯಲ್ಲಿ ವಿಜೃಂಭಣೆಯಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಶಾಲಾ ಸೇವಾ ಸಮಿತಿಯ ಅಧ್ಯಕ್ಷ ದಿವಾಕರ ಶಾಸ್ತ್ರಿ ಇವರು ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಧ್ವಜರೋಹಣ ಬಳಿಕ ವಿದ್ಯಾರ್ಥಿಗಳು ದ್ವಜ ಗೀತೆ, ರಾಷ್ಟ್ರ ಗೀತೆ ಹಾಡಿ ಕೊನೆಯಲ್ಲಿ ಪಥ ಸಂಚಲನ ನೆರವೇರಿಸಿದರು.
ಈ ಸಂದರ್ಭದಲ್ಲಿ ಆಂಗ್ಲ ಮಾಧ್ಯಮ ಪ್ರೌಡ ಶಾಲೆಯ ಮುಖ್ಯ ಶಿಕ್ಷಕಿ ಶೋಭಿತ ಕೆ ಆರ್ ಹಾಗೂ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಣ್ಣಪ್ಪ ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಬಳಿಕ ಶಾಲಾ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ತಮ್ಮ ಹೆತ್ತವರಿಗಾಗಿ ಮಾತಾ ಪಿತೃ ಪೂಜೆ ನೆರವೇರಿತು.
ಪುರೋಹಿತರಾದ ವಿಷ್ಣು ಪ್ರದೀಪ್ ಇವರ ಮಾರ್ಗದರ್ಶನದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಹೆತ್ತವರ ಪಾದ ಪೂಜೆ ಸಲ್ಲಿಸಿ ಅವರ ಆಶೀರ್ವಾದ ಪಡೆದರು.
ತದನಂತರ ಶಾಲೆಯಲ್ಲಿ ಈ ಮೊದಲು ಶಿಕ್ಷಕಿ ಆಗಿ ಸೇವೆ ಸಲ್ಲಿಸಿದ ಹರ್ಷಿತಾ ಗಿರೀಶ್ ಹಾಗೂ ಪ್ರಸ್ತುತ ಸೇವ್ ಸಲ್ಲಿಸುತ್ತಿರುವ ಉಷಾ ತಿರುಮಲೇಶ್ವರ ಪ್ರಸನ್ನ ಇವರುಗಳಿಗೆ ಶಿಕ್ಷಕ ವೃಂದದವರಿಂದ ಮಡಿಲು ತುಂಬುವ ಶಾಸ್ತ್ರವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿ ತಿಂಡಿ ವಿತರಿಸಲಾಯಿತು.