ಬೆಳಾಲು: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ ಬೆಳಾಲು ಮತ್ತು ಉಜಿರೆ ಶ್ರೀ ಧ.ಮ.ಕಾಲೇಜಿನ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದವರಿಂದ ಪರೀಕ್ಷೆಯ ತಯಾರಿ, ಎಸ್ ಎಸ್ ಎಲ್ ಸಿ ಯ ನಂತರದ ಅವಕಾಶಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡರು ಮಾತನಾಡುತ್ತಾ, ಯೋಜನಾ ಬದ್ಧವಾದ ಓದು ಮತ್ತು ಗುರಿ ನಿರ್ಧಾರಿತ ಅಧ್ಯಯನ ವಿದ್ಯಾರ್ಥಿ ಜೀವನದ ಯಶಸ್ಸಿನ ಮುಖ್ಯ ಅಂಶವಾಗಿರುತ್ತದೆ.ಜೀವನದಲ್ಲಿ ಅವಕಾಶಗಳು ಎಲ್ಲರಿಗೂ ಸಮಾನವಾಗಿರುತ್ತದೆ.ವಿದ್ಯಾರ್ಥಿಗಳು ಅಂತಹ ಅವಕಾಶವನ್ನು ಪಡಕೊಳ್ಳುವ ಪ್ರಯತ್ನಶೀಲರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ರವರು ವಹಿಸಿದ್ದರು.ಉಪನ್ಯಾಸಕ ಡಾ.ಅಕ್ಷತಾ ರಾವ್ ಮತ್ತು ಪಂಚಾಯತ್ ವಾಚನಾಲಯ ಅಧಿಕಾರಿ ಡೀಕಯ್ಯ ಗೌಡರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.