ಆರಂಬೋಡಿ ಗ್ರಾಮದ ಹಕ್ಕೇರಿ-ಗುಂಡೀರಿ ರಸ್ತೆಯ ಸೇತುವೆಗೆ ತಾಗಿಕೊಂಡು ನದಿಗೆ ಪಾರಂಪರಿಕ ನೀರಿನ ಕಟ್ಟಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಗೋಣಿ ಚೀಲಕ್ಕೆ ಹೊಯಿಗೆ ಹಾಕುವ ಮೂಲಕ ಚಾಲನೆ ನೀಡಿದರು.
ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ರಮೇಶ್ ಕುಂಜಾಡಿ ಅಧ್ಯಕ್ಷತೆ ವಹಿಸಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಮೃತಿ, ಮಹಾವೀರ ಕಾಲೇಜಿನ ರಾಷ್ಟೀಯ ಸೇವಾ ಯೋಜನಾಧಿಕಾರಿ ಶಾರದಾ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಸಿದ್ದಕಟ್ಟೆ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ವಕೀಲ ಶಿವಯ್ಯ.ಎಸ್.ಎಲ್, ಪಂಚಾಯತ್ ಸದಸ್ಯರಾದ ರಮೇಶ್ ಮಂಜಿಲ, ಸುಧರ್ಶನ್ ಶೆಟ್ಟಿ, ಲೀಲ ಸುರೇಶ, ಸುರೇಂದ್ರ ಮತ್ತು ಸತೀಶ್ ಮಠ, ಪ್ರಮುಖರಾದ ಅರವಿಂದ ಶೆಟ್ಟಿ, ರಮೇಶ್ ಪೂಜಾರಿ ಪಡ್ಡಾಯಿಮಜಲು, ನಿತೀಶ್ ಗುಂಡೂರಿ, ಹರೀಶ್ ಶೆಟ್ಟಿ ಕುಂಜಾಡಿ, ಪದ್ಮನಾಭ, ಇಸ್ಮಾಯಿಲ್ ಕೆ.ಪೆರಿಂಜೆ, ಎನ್ ಎಸ್ ಎಸ್ ವಿದ್ಯಾರ್ಥಿ ಕಾರ್ಡಿನಟೋರ್ ನಿತೀಶ್ ಉಪಸ್ಥಿತರಿದ್ದರು.
ಹೊಸಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತಾಡಿದರು.