ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಕಾನರ್ಪದಲ್ಲಿ ಚಿರಂಜೀವಿ ಯುವಕ ಮಂಡಲ (ರಿ) ಕಾನರ್ಪ ಕಡಿರುದ್ಯಾವರ, ಶ್ರೀ ದುರ್ಗಾಶಕ್ತಿ ಮಹಿಳಾ ಸಂಘ, ಚಿರಂಜೀವಿ ಉತ್ಸವ ಆಚರಣಾ ಸಮಿತಿ ಕಾನರ್ಪ ಕಡಿರುದ್ಯಾವರ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಚಿರಂಜೀವಿ ಉತ್ಸವ-2023 ಕಾರ್ಯಕ್ರಮವನ್ನು ಸ.ಹಿ.ಪ್ರಾ.ಶಾಲೆ ಕೊಡಿಯಾಲ್ ಬೈಲ್ ಕಾನರ್ಪದಲ್ಲಿ ಉದ್ಯಮಿಗಳಾದ ಪ್ರಹ್ಲಾದ್ ಫಡಕೆ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಗ್ರಾಮೀಣ ಕ್ರೀಡಾಕೂಟ ಹಾಗೂ ವಲಯ ಮಟ್ಟದ ಕಬ್ಬಡ್ಡಿ ಪಂದ್ಯಾಟ, ಸಾಧಕರ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಸಮಾರೋಪ ಸಮಾರಂಭದಲ್ಲಿ ಸುರೇಶ್ ಪರ್ಕಳ ರವರು ಮಾತನಾಡುತ್ತಾ ಇಂದಿನ ಯುವಜನತೆ ಧಾರ್ಮಿಕ ಹಾಗೂ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಹಾಗೂ ಭವ್ಯ ಭಾರತದ ನಿರ್ಮಾಣದಲ್ಲಿ ಹೆಚ್ಚು ಅಮ್ಮ ಎಂಬ ಪದವು ಬಹಳ ಅರ್ಥಪೂರ್ಣವಾಗಿರುವುದು ಇತ್ತೀಚಿಗೆ ಶಿಕ್ಷಣ ಪದ್ಧತಿ ಬದಲಾಗುತ್ತಾ ನಮಗೆ ಅರಿವಿಲ್ಲದೇ ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲುವಂತೆ ಮಾಡುತ್ತಿದೆ ಹಿಂದೆ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡುವ ಪದ್ಧತಿ ಇತ್ತು.ಬದಲಾದ ಕಾಲಘಟ್ಟದಲ್ಲಿ ಧರ್ಮ ಪ್ರಬೊಧನೆ ಮಾಡಬೇಕಾದ ದೇವಸ್ಥಾನ, ಮಠಮಂದಿರಗಳಲ್ಲಿ ವ್ಯಾಪಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.ಕಳೆದ 33 ವರ್ಷಗಳಿಂದ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯುತ್ತಾ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಯುವಕ ಮಂಡಲದಿಂದ ಮಾತ್ರ ಯುವಜನತೆಯನ್ನು ಜಾಗೃತಗೊಳಿಸುವ ಕೆಲಸ ಆಗುತ್ತಿದೆ ಪ್ರತಿಯೊಬ್ಬ ವ್ಯಕ್ತಿಯೂ ದೇಶ ಕಟ್ಟುವ ಜವಾಬ್ದಾರಿಯನ್ನು ಯುವಜನರು ಮಾಡಬೇಕಾಗಿದೆ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತರಾದ ಬಿ.ಕೆ.ದೇವ ರಾವ್ , ಸಾಮಾಜಿಕ ಕ್ಷೇತ್ರದಿಂದ ಕೆ.ಮೋಹನ್ ಕುಮಾರ್ ಲಕ್ಷ್ಮಿ ಗ್ರೂಪ್ ಉಜಿರೆ, ಶೈಕ್ಷಣಿಕ ಕ್ಷೇತ್ರದಿಂದ ಸುಮಂತ್ ಕುಮಾರ್ ಜೈನ್ ಅಧ್ಯಕ್ಷರು ಎಕ್ಸೆಲ್ ಕಾಲೇಜ್, ಕಾರ್ಮಿಕ ಕ್ಷೇತ್ರದಿಂದ ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಸ್ಥಳೀಯ ಕ್ರೀಡಾ ಪ್ರತಿಭೆಗಳಾದ ಕುಮಾರಿ ಗೌತಮಿ, ಕುಮಾರಿ ಧನ್ಯಾ.ಎಸ್, ಕುಮಾರಿ ಪ್ರಾಪ್ತಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಜನಾರ್ಧನ್ ಕೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಚಾಮುಂಡೇಶ್ವರಿ ಕ್ಷೇತ್ರ ಅರಿಕೋಡಿ ಬೆಳಾಲು ಇದರ ಧರ್ಮದರ್ಶಿಗಳಾದ ಹರೀಶ್ ಗೌಡ, ಬದುಕು ಕಟ್ಟೋಣ ತಂಡದ ಮುಖ್ಯಸ್ಥರು ಹಾಗೂ ಲಕ್ಷ್ಮಿ ಗ್ರೂಪ್ ನ ಮಾಲಕರಾದ ಮೋಹನ್ ಕುಮಾರ್, ಬೆನಕ ಹಾಸ್ಪಿಟಲ್ ಉಜಿರೆಯ ಮೆಡಿಕಲ್ ಡೈರೆಕ್ಟರ್ ಡಾ.ಗೋಪಾಲಕೃಷ್ಣ , ಗ್ರಾಮ ಪಂಚಾಯತ್ ಕಡಿರುದ್ಯಾವರದ ಅಧ್ಯಕ್ಷೆ ರತ್ನಾವತಿ ಬಾಲಕೃಷ್ಣ, ಕೊಡಿಯಾಲಬೈಲು ಶಾಲೆಯ ಎಸ್.ಡಿ.ಎಂ.ಸಿ ಯ ಅಧ್ಯಕ್ಷ ರಾಘವೇಂದ್ರ ಭಟ್, ಶಾಲೆಯ ಮುಖ್ಯೋಪಾಧ್ಯಾಯರಾದ ಫಿಲೋಮಿನಾ ಸಿ.ಜೆ, ಆರಕ್ಷಕ ಸಿಬ್ಬಂದಿ ಜಗದೀಶ್ ಸಾಲಿಯಾನ್, ಉದ್ಯಮಿ ದಿನೇಶ್ ಪೂಜಾರಿ, ಮಹೇಶ್ ಕೆ ಗೌಡ, ಚನ್ನಕೇಶವ ನಾಯ್ಕ, ಸುರೇಶ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಜ್ಞಾ ಒಡಿಲ್ನಾಳ ಹಾಗೂ ರಾಜೇಶ್ ಕಾನರ್ಪ ನಿರೂಪಿಸಿ, ರಾಮಚಂದ್ರಗೌಡ ಸ್ವಾಗತಿಸಿ, ಜಯರಾಜ್ ಸಾಲಿಯಾನ್ ವಂದಿಸಿದರು.