ಪದ್ಮುಂಜ ಇಲ್ಲಿಯ ಸರಕಾರಿ ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಯುವರಾಜ ಇಂದ್ರ ರವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 23 ರಂದು ನಡೆಯಿತು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಗೇರುಕಟ್ಟೆ ಸರಕಾರಿ ಶಾಲೆಯ ಉಪನ್ಯಾಸಕ ದಿನೇಶ್ ರವರು ದುಂಬಿಗಳು ಹೂಗಳಿಂದ ಮಕರಂದವನ್ನು ಸಂಗ್ರಹಿಸಿ ಜೀವಿಸಿದ ಹಾಗೆ ನೀವು ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಇನ್ನೊಬ್ಬರಿಗೆ ತೊಂದರೆಯಾಗದ ರೀತಿಯಲ್ಲಿ ನಿಮ್ಮ ಏಳಿಗೆಯನ್ನು ನೀವೇ ಮಾಡಿಕೊಳ್ಳಬೇಕು ಎಂದರು ಪ್ರತಿಭೆಯೊಂದೇ ಸಾಲದು ಪ್ರತಿಭೆಯೊಂದಿಗೆ ಶಿಸ್ತು ಬಹಳ ಮುಖ್ಯ ನಿಮ್ಮಲ್ಲಿ ಶಿಸ್ತು ಇಲ್ಲ ಎಂದಾದರೆ ನಿಮ್ಮನ್ನು ಯಾರೂ ಗೌರವಿಸುವುದಿಲ್ಲ ಎಂದರು.
ಸದಾಶಿವ ಶೆಟ್ಟಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು.ಮುಖ್ಯ ಶಿಕ್ಷಕಿ ಸುಮತಿಯವರು ವಾರ್ಷಿಕ ವರದಿ ವಾಚಿಸಿದರು.ವರ್ಗಾವಣೆಗೊಂಡ ಸದಾನಂದ ಬಿರಾದಾರ್ ಹಾಗೂ ಆಶಾಲತಾರವರನ್ನು ಸನ್ಮಾನಿಸಲಾಯಿತು.ಕಾವ್ಯಶ್ರೀ ಮತ್ತು ಚೈತ್ರಾ ರವರು ಸನ್ಮಾನಿತರ ಪರಿಚಯ ಓದಿ ಹೇಳಿದರು.ಸವಿತಾ ನಮಿತಾ ಆನಂತಕೃಷ್ಣ ರವರು ಬಹುಮಾನ ವಿತರಣೆ ನಡೆಸಿಕೊಟ್ಟರು.ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇ.100 ಫಲಿತಾಂಶ ತಂದುಕೊಟ್ಟ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪಂ.ಸದಸ್ಯ ಸೀತಾರಾಮ ಮಡಿವಾಳ, ಹಾ.ಉ.ಸ ಸಂಘದ ಅಧ್ಯಕ್ಷ ಪುರುಷೋತ್ತಮ, ಕೃಷ್ಣ ಶೆಟ್ಟಿ ಕೊಲ್ಲೊಟ್ಟು, ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು.
ತದನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ದೈಹಿಕ ಶಿಕ್ಷಕ ವಿನಯ ಕುಮಾರ್ ರವರು ಸ್ವಾಗತಿಸಿದರು.ಗಾಯತ್ರಿ ಹಾಗೂ ಸೌಮ್ಯ ರವರು ಕಾರ್ಯಕ್ರಮ ನಿರೂಪಿಸಿದರು.ರೇಣುಕಾರವರು ಧನ್ಯವಾದ ಸಲ್ಲಿಸಿದರು.