ಲಾಯಿಲ: ಡಿ.19ರಂದು ಲಾಯಿಲ ಗ್ರಾಮ ಪಂಚಾಯತ್ ನ ಭಾರತ್ ಮಾತಾ ಸಭಾಭವದಲ್ಲಿ 2023-24ನೇ ಸಾಲಿನ ಮಕ್ಕಳ ಗ್ರಾಮ ಸಭೆಯನ್ನು ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ ವಹಿಸಿಕೊಂಡರು ಹಾಗೂ NRLM ನ ತಾಲೂಕು ಸಂಯೋಜಕ ವಿನೋದ್ ಪ್ರಸಾದ್ ರವರು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಸುಗಂಧಿ ಜಗನ್ನಾಥ, ಕರ್ನೊಡಿ ಶಾಲಾ ಮುಖ್ಯೋಪಾಧ್ಯಾಯರಾದ ಜಗನ್ನಾಥ ಹಾಗೂ ಪಡ್ಲಾಡಿ ಮುಖ್ಯೋಪಾಧ್ಯಾಯರಾದ ರಾಜೇಶ್ವರಿ, ಪಂಚಾಯತ್ ಸದಸ್ಯರಾದ ಜಯಂತಿ, ಮಹೇಶ್.ಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಡಿ.ಪಿ ಹಾಗೂ ಮಾಜಿ ಅಧ್ಯಕ್ಷ ರುಕ್ಮಯ್ಯ ಕನ್ನಾಜೆ ಮತ್ತು ಕುಂಟಿನಿ ಶಾಲಾ ನಾಯಕಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ಕೆ.ಮಕ್ಕಳ ಹಕ್ಕು, ಕರ್ತವ್ಯಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಸವಿರವಾಗಿ ಸಭೆಗೆ ಮಾಹಿತಿ ನೀಡಿದರು.ಮಕ್ಕಳಿಗೆ ಶಾಲೆಯಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಿಗೆ ಬಹುಮಾನ ವಿತರಿಸಲಾಯಿತು ಮತ್ತು ಶಾಲಾ ಮಕ್ಕಳ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಸಭೆಯ ನಿರೂಪಣೆಯನ್ನು ಪಂಚಾಯತ್ ಲೆಕ್ಕಾ ಸಹಾಯಕರಾದ ಸುಪ್ರಿತಾ ಎಸ್ ಶೆಟ್ಟಿ ನಡೆಸಿಕೊಟ್ಟರು ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.