ಅರಸಿನಮಕ್ಕಿ: ಅರಸಿನಮಕ್ಕಿ ಗ್ರಾಮ ಪಂಚಾಯತ್ ನ ಸಹಯೋಗದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವು ಡಿ.16 ರಂದು ಅರಸಿನಮಕ್ಕಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿ ಮಾತನಾಡಿ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಗಾಯತ್ರಿ ವಹಿಸಿದರು.ಕಾರ್ಯಕ್ರಮದಲ್ಲಿ ಆರ್ಥಿಕ ಸಾಕ್ಷರತ ಸಂಯೋಜಕಿ ಉಷಾ ರವರು ವಿವಿಧ ಸೌಲಭ್ಯಗಳ ಹಾಗೂ ಯೋಜನೆಗಳ ಅನುಷ್ಠಾನದ ಬಗ್ಗೆ ವಿಸ್ಕೃತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ಕೆನರಾ ಬ್ಯಾಂಕ್ ಕವಿತಾ ಎನ್. ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಶಿಶಿಲ ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ರಾಕೇಶ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಕೊಕ್ಕಡ ಗ್ರಾ.ಪಂ ಮಾಜಿ ಅಧ್ಯಕ್ಷ ಯೋಗೀಶ್ ಆಲಂಜಿಲ, ಕರುಣಾಕರ ಆಲಂಬಿಲ, ಶಿಶಿಲ ಗ್ರಾ.ಪಂ ಮಾಜಿ ಅಧ್ಯಕ್ಷ ಸಂದೀಪ ಅಮ್ಮುಡಂಗೆ, ಶಿಶಿಲ ಗ್ರಾ.ಪಂ ಅಧ್ಯಕ್ಷ ಸುಧೀನ್ ಡಿ., ಅನ್ನಪೂರ್ಣ, ಫಲಾನುಭವಿಗಳು ಉಪಸ್ಥಿತರಿದ್ದರು.
ದನಿಷ ಮತ್ತು ಮಾನಸ ಪ್ರಾರ್ಥಿಸಿ, ಶಿಶಿಲ ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ರಾಕೇಶ್ ಸ್ವಾಗತಿಸಿದರು.ಶಿಬಾಜೆ ಗ್ರಾ.ಪಂ ಉಪಾಧ್ಯಕ್ಷ ದಿನಕರ ಕುರೂಪ್ ಕಾರ್ಯಕ್ರಮ ನಿರೂಪಿಸಿದರು.ಹತ್ಯಡ್ಕ ಶಕ್ತಿ ಕೇಂದ್ರದ ಪ್ರಮುಖ್ ಗಣೇಶ್ ಕೆ.ಹೊಸ್ತೋಟ ಧನ್ಯವಾದವಿತ್ತರು.