ನಾವರ: ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಬಾ.ವಿ.ಸ ಅಧ್ಯಕ್ಷೆ ಪವಿತ್ರ ನಡೆಸಿದರು.ಮುಖ್ಯ ಅತಿಥಿಗಳಾಗಿ ಸುಲ್ಕೇರಿ ಗ್ರಾ.ಪಂ ಅಧ್ಯಕ್ಷೆ ಗಿರಿಜಾ, ಗ್ರಾ.ಪಂ ಸದಸ್ಯ ರವಿ ಪೂಜಾರಿ, ನಾವರ ಶಾಲಾ ಮುಖ್ಯೋಪಾದ್ಯಾಯಿನಿ ಶಶಿದೇವಿ, ಮಾಜಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಹರಿಣಿ ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಹರಿಣಿ ಎಲ್ ಪೂಜಾರಿ ಮಾತನಾಡಿ, ಮಕ್ಕಳ ಭವಿಷ್ಯದ ಮೊದಲ ಪಾಠಶಾಲೆ ಪ್ರಾರಂಭವಾಗುವುದೇ ಅಂಗನವಾಡಿ ಕೇಂದ್ರದ ಮೂಲಕ.ಇಲ್ಲಿ ಅಂಗನವಾಡಿ ಕಾರ್ಯಕರ್ತೆಯವರು ಮಕ್ಕಳಿಗೆ ಶಿಕ್ಷಕಿಯರಾಗಿಯೂ, ಎರಡನೇ ತಾಯಿಯಾಗಿಯೂ ಜವಾಬ್ದಾರಿಯನ್ನು ನಿರ್ವಹಿಸುವವರು ಆಗಿರುತ್ತಾರೆ.ಆದ್ದರಿಂದ ಮಗುವಿನ ಮೊದಲ ಗುರುವೇ ಅಂಗನವಾಡಿ ಕಾರ್ಯಕರ್ತೆಯರು ಎಂದು ಹಾಗು ಪೋಷಕರು ತಮ್ಮ ಮಕ್ಕಳೊಂದಿಗೆ ಬೆರೆಯಬೇಕೆಂದು ಹೇಳಿದರು.
ಮುದ್ದು ಮಕ್ಕಳಿಗೆ ಆಯೋಜಿಸಿದ ಸ್ಪರ್ಧೆಯ ವಿಜೇತರಿಗೆ ಎಲ್ಲಾ ಮಕ್ಕಳಿಗೂ ಬಹುಮಾನವನ್ನು ಹಳೆ ವಿದ್ಯಾರ್ಥಿ ಸಂಘ ನಾವರ ಇವರ ವತಿಯಿಂದ ವಿತರಿಸಲಾಯಿತು.ಸ್ತ್ರೀ ಶಕ್ತಿ ಸಂಘದ ಎಲ್ಲಾ ಸದಸ್ಯರು ಮತ್ತು ಮಕ್ಕಳ ಪೋಷಕರು ಸಹಕರಿಸಿದರು.ಅಂಗನವಾಡಿ ಕಾರ್ಯಕರ್ತೆ ಅರುಣ ಕುಮಾರಿ ಬಿ.ಯವರು ಸ್ವಾಗತಿಸಿ, ನಿರೂಪಿಸಿ, ಅಂಗನವಾಡಿ ಸಹಾಯಕಿ ಸುಜಾತ ವಂದಿಸಿದರು.