ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ದೀಪೋತ್ಸವದ ಅಂಗವಾಗಿ ಡಿ.12ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನ 2023, 91 ನೇ ಅಧಿವೇಶನ ನಡೆಯಿತು.
ಕಾರ್ಯಕ್ರಮದ ಮೊದಲು ಮೆರವಣಿಗೆ ಮೂಲಕ ಅತಿಥಿಗಳ ಪ್ರವೇಶ ನಡೆದು ಉಜಿರೆ ಶ್ರೀ ಧ.ಮಂ.ಸ್ವಾಯತ್ತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನಾಡಗೀತೆಯೊಂದಿಗೆ ಆರಂಭಗೊಂಡಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದರು.
ಸಮ್ಮೇಳನದ ಉದ್ಘಾಟನೆಯನ್ನು ಬೆಂಗಳೂರು ಇಸ್ರೋ ವಿಜ್ಞಾನಿಗಳು ಮತ್ತು ನಿರ್ದೇಶಕ ರಾಮಕೃಷ್ಣ ಬಿ. ಎನ್. ನೆರವೇರಿಸಿದರು.
ವಿದ್ವಾಂಸರು ಮತ್ತು ಪ್ರಖ್ಯಾತ ಗಮಕಿಗಳು ಡಾ.ಎ. ವಿ. ಪ್ರಸನ್ನ ಅಧ್ಯಕ್ಷತೆಯನ್ನು ವಹಿಸಿ “ಬಾಲ ಬೋಧ “ಪುಸ್ತಕ ಬಿಡುಗಡೆ ಮಾಡಿದರು.
ಡಾ. ಶ್ರೀಪ್ರಸಾದ ಶೆಟ್ಟಿ ಹೊನ್ನಾವರ, ಪ್ರಕಾಶ ಬೆಳವಾಡಿ ಬೆಂಗಳೂರು, ಡಾ. ಅಜಕ್ಕಳ ಗಿರೀಶ್ ಭಟ್ ಬಂಟ್ವಾಳ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಸಂಚಾರಿ ಗ್ರಂಥಾಲಯವನ್ನು ಉದ್ಘಾಟಿಸಿದರು.ಸ್ವಾಗತ ಸಮಿತಿಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಿ. ಶ್ರೇಯಸ್ ಕುಮಾರ್, ಪೂರನ್ ವರ್ಮಾ ಸನ್ಮಾನ ಪತ್ರ ವಾಚಿಸಿದರು.
ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ನ್ಯಾಯಾವಾದಿ ಕೇಶವ ಗೌಡ ಪಿ.ವಂದಿಸಿದರು.
ಉಪನ್ಯಾಸಕ ಡಾ.ದಿವಾ ಕೊಕ್ಕಡ ಮತ್ತು ಡಾ.ರಾಜಶೇಖರ್ ಹಳೆಮನೆ ನಿರೂಪಿಸಿದರು.