


ನೆಲ್ಯಾಡಿ: ನೆಲ್ಯಾಡಿ ಮತ್ತು ಪರಿಸರ ಪ್ರದೇಶಗಳಲ್ಲಿನ ಕ್ರೈಸ್ತರ ಸಾಮೂಹಿಕ ಹಬ್ಬ ಕ್ರಿಸ್ಮಸ್ ಗೆ ಸಿದ್ಧತೆಯಾಗಿ ವರ್ಷಮ್ ಪ್ರತಿ ನಡೆಯುವ ಸಾಮೂಹಿಕ ಆಚರಣೆ ಸಂಯುಕ್ತ ಕ್ರಿಸ್ಮಸ್ ಇದರ ಪೂರ್ವಬಾವಿ ಸಭೆ ಡಿ.3ರಂದು ನೆಲ್ಯಾಡಿ ಅಲ್ಫೋನ್ಸ ಚರ್ಚ್ ನಲ್ಲಿ ನಡೆಯಿತು.
ಸಭೆಯಲ್ಲಿ ರೆ ಫಾ.ಸಣ್ಣಿ ಅಬ್ರಹಾಂ ಅವರನ್ನು ಸಮಿತಿ ಯ ಅಧ್ಯಕ್ಷರನ್ನಾಗಿ, ರೆ ಫಾ.ಜೋಸೆಫ್ ಪಾ೦ಪಕ್ಕಲ್ ಅವರನ್ನು ಮುಖ್ಯ ಸಂಘಟಕರಾಗಿಯೂ ರೆ.ವರ್ಗೀಸ್ ಕೈಪನಡ್ಕ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.


ಕೋಶಾಧಿಕಾರಿಯಾಗಿ ಜೋಸೆಫ್ ವಿ ಜೆ ಹಾಗೂ ಮನೋಜ್ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನ ಧರ್ಮ ಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು ಎಲ್ಲರನ್ನು ಸ್ವಾಗತಿಸಿ, ಮನೋಜ್ ಧನ್ಯವಾದವನ್ನಿತ್ತರು.
ಆಕರ್ಷಕವಾದ ಶೋಭಾಯಾತ್ರೆಯೊಂದಿಗೆ ಡಿಸೆಂಬರ್ ತಿಂಗಳ 17ನೇ ಆದಿತ್ಯವಾರ ನಾಲ್ಕು ಘಂಟೆಗೆ ಈ ವರ್ಷದ ವರ್ಣರಂಜಿತ ಸಂಯುಕ್ತ ಕ್ರಿಸ್ಮಸ್ ಗೆ ಚಾಲನೆ ನೀಡಲಿದೆ.ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತಿವಂದನಿಯ ಲಾರೆನ್ಸ್ ಮುಕ್ಕುಯಿ, ಐವನ್ ಡಿಸೋಜ ಮುಖ್ಯ ಅತಿಥಿಗಳಾಗಿ ಬಾಗವಹಿಸಲಿದ್ದಾರೆ.ಪ್ರತಿ ಚರ್ಚ್ ನಿಂದ ಆಕರ್ಷಕ ಮನರಂಜನಾ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದ್ದಾರೆ.


            





