ಕರ್ನಾಟಕ ರಾಜ್ಯ ಪರವನ್ ಸಂಘ ದ.ಕ ಜಿಲ್ಲೆ, ಬೆಳ್ತಂಗಡಿ ತಾಲೂಕು ಸಮಿತಿ ಇದರ ಉದ್ಘಾಟನಾ ಸಮಾರಂಭ, ಅಭಿನಂದನಾ ಕಾರ್ಯಕ್ರಮ

0

ಬೆಳ್ತಂಗಡಿ: ಕರ್ನಾಟಕ ರಾಜ್ಯ ಪರವನ್ ಸಂಘ ದ.ಕ ಜಿಲ್ಲೆ, ಬೆಳ್ತಂಗಡಿ ತಾಲೂಕು ಸಮಿತಿ ಇದರ ಉದ್ಘಾಟನಾ ಸಮಾರಂಭ, ಅಭಿನಂದನಾ ಕಾರ್ಯಕ್ರಮ ಹಾಗೂ ದ.ಕ ಹಾಗೂ ಉಡುಪಿ ಅಂತರ್ ಜಿಲ್ಲಾ ಮಟ್ಟದ ಪರವನ್ ಸಮಾಜದ ಯುವಕರಿಗೆ ಮುಕ್ತ ಕಬಡ್ಡಿ ಪಂದ್ಯಾಟ, ಪುರುಷರಿಗೆ ಮುಕ್ತ ಕಬಡ್ಡಿ ಪಂದ್ಯಾಟ, ಮುಕ್ತ 7 ಜನ ಹಗ್ಗ ಜಗ್ಗಾಟ, ಮಹಿಳೆಯರಿಗೆ ಮುಕ್ತ 7 ಜನರ ಹಗ್ಗ ಜಗ್ಗಾಟವು ನ.26ರಂದು ವೇಣೂರು, ಗೋಳಿಯಂಗಡಿ, ಕುಕ್ಕೇಡಿ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಯಕ್ಷಗಾನ ಕಲಾವಿದ ಸುಂದರ ಬಂಗಾಡಿ ಇವರು ನೆರವೇರಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಅಧ್ಯಕ್ಷತೆಯನ್ನು ರಾಜ್ಯ ಕರ್ನಾಟಕ ಪರವನ್ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಉದಯ ಹಚ್ಚೆವು ಇವರು ವಹಿಸಿದ್ದರು.

ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ಅನಿತ, ಕರ್ನಾಟಕ ರಾಜ್ಯ ಪರವನ್ ಸಂಘ ಮೂಡಬಿದಿರೆ ಇದರ ಗೌರವಾಧ್ಯಕ್ಷ ಶೀನ ಮಾಲಾಡಿ, ಕರ್ನಾಟಕ ರಾಜ್ಯ ಪರವನ್ ಸಂಘ ಬೆಳ್ತಂಗಡಿ ತಾಲೂಕು ಗೌರವಾಧ್ಯಕ್ಷ ಅಂಗಾರ ಕಾಲ್ಯೊಡಿ, ಕರ್ನಾಟಕ ರಾಜ್ಯ ಪರವನ್ ಸಂಘ ಮೂಡಬಿದಿರೆ ಇದರ ಅಧ್ಯಕ್ಷ ನಾರಾಯಣ ಮಾಂಟ್ರಾಡಿ, ಮೂಡಬಿದಿರೆ ಕರ್ನಾಟಕ ರಾಜ್ಯ ಪರವನ್ ಸಂಘದ ಉಪಾಧ್ಯಕ್ಷ ಸುರೇಶ್ ಮರೋಡಿ, ಕರ್ನಾಟಕ ರಾಜ್ಯ ಪರವನ್ ಸಂಘ ಮಾಳ, ಕಾರ್ಕಳ ಅಧ್ಯಕ್ಷ ಸಂಜೀವ ಮಾಳ, ಮೂಡಬಿದಿರೆ ಕರ್ನಾಟಕ ರಾಜ್ಯ ಪರವನ್ ಸಂಘದ ಕಾರ್ಯದರ್ಶಿ ನಿರಂಜನ್ ಬಾಚಾಕೆರೆ, ಬೆಳ್ತಂಗಡಿ ತಾಲೂಕು ಕರ್ನಾಟಕ ರಾಜ್ಯ ಪರವನ್ ಸಂಘದ ಉಪಾಧ್ಯಕ್ಷ ಎಚ್.ಪದ್ಮ, ಬೆಳ್ತಂಗಡಿ ತಾಲೂಕು ಕರ್ನಾಟಕ ರಾಜ್ಯ ಪರವನ್ ಸಂಘದ ಕಾರ್ಯದರ್ಶಿ ಹರೀಶ್ ರನ್ನಾಡಿಪಲ್ಕೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರವೀಶ್ ಪಡುಮಲೆ, ಸುಂದರ ಬಂಗಾಡಿ, ಸಿದ್ಧಕಟ್ಟೆ ಮಾಧವ, ಮಾನಸ ಎಂ.ಮಾಡಾವು, ಅಭಿಷೇಕ್ ಬಜಗೋಳಿ ಇವರನ್ನು ಸನ್ಮಾನಿಸಲಾಯಿತು.

ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಬಂಗಾರಿ ಫ್ರೆಂಡ್ಸ್ ಸುಳ್ಯ, ದ್ವಿತೀಯ ಸ್ಥಾನ ಸ್ವಾಮಿ ಬೊಳ್ಳಜ್ಜ ಬಳೆಂಜ, ತೃತೀಯ ಸ್ಥಾನ ವಿಷ್ಣುಮೂರ್ತಿ ಮಿಜಾರು, ಚತುರ್ಥ ಸ್ಥಾನ ತತ್ವಮಸಿ ಬ್ರದರ್ಸ್ ನಾರಾವಿ ಹಾಗೂ ಪುರುಷರ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ವಿಷ್ಣುಮೂರ್ತಿ ಮಾಳ (ಎ), ದ್ವಿತೀಯ ಸ್ಥಾನ ವಿಷ್ಣುಮೂರ್ತಿ ಮಾಳ (ಬಿ) ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಶ್ರೀ ದುರ್ಗಾ ಬಾಚಕೆರೆ, ದ್ವಿತೀಯ ಸ್ಥಾನ ಬಂಗಾರಿ ಫ್ರೆಂಡ್ಸ್ ಸುಳ್ಯ ಪಡೆದುಕೊಂಡರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಕರ್ನಾಟಕ ಪರವನ್ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಉದಯ ಹಚ್ಚೆವು ಇವರು ಅಧ್ಯಕ್ಷತೆ ವಹಿಸಿದ್ದರು.ಸಾಮಾಜಿಕ ಕಾರ್ಯಕರ್ತ ಶೇಖರ್ ಕುಕ್ಕೇಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ರಾಜ್ಯ ಕರ್ನಾಟಕ ಪರವನ್ ಸಂಘ ಮೂಡಬಿದಿರೆಯ ಅಧ್ಯಕ್ಷ ನಾರಾಯಣ ಮಾಂಟ್ರಾಡಿ, ರಾಜ್ಯ ಕರ್ನಾಟಕ ಪರವನ್ ಸಂಘ ಬೆಳ್ತಂಗಡಿ ತಾಲೂಕು ಸಮಿತಿಯ ಗೌರವಾಧ್ಯಕ್ಷ ಕೃಷ್ಣಪ್ಪ ರನ್ನಾಡಿಪಲ್ಕೆ ಉಪಸ್ಥಿತರಿದ್ದರು.

ಪ್ರವೀಣ್ ಕಕ್ಕಿಂಜೆ ಪ್ರಾಸ್ತಾವಿಕ ಮಾತನಾಡಿದರು.ಅಭಿಷೇಕ್ ಬಜಗೋಳಿ ಕಾರ್ಯಕ್ರಮ ನಿರೂಪಿಸಿ, ಸಂತೋಷ್ ಮಾಳ ಸ್ವಾಗತಿಸಿ, ಹರೀಶ್ ಕುಂಡದಬೆಟ್ಟು ಧನ್ಯವಾದವಿತ್ತರು.ಇದರ ಪ್ರಯುಕ್ತ ಏರ್ಪಡಿಸಲಾಗಿದ್ದ ಲಕ್ಕಿಡಿಪ್ ಡ್ರಾ ಫಲಿತಾಂಶ ನಡೆಯಿತು.

ಕಾರ್ಯಕ್ರಮದಲ್ಲಿ ಕ್ರೀಡಾ ಸಮಿತಿಯ ಸಂಚಾಲಕರು, ಅಧ್ಯಕ್ಷರು, ಉಪಾಧ್ಯಕ್ಷರು, ಕೋಶಾಧಿಕಾರಿ, ಸದಸ್ಯರು ಉಪಸ್ಥಿತರಿದ್ದು, ಸಹಕರಿಸಿದರು.

p>

LEAVE A REPLY

Please enter your comment!
Please enter your name here