ಬೆಳ್ತಂಗಡಿ: ಬೆಳ್ತಂಗಡಿಹಳೆಕೋಟೆ ಜೋರ್ಡನ್ ರಿವರ್ ರೆಸ್ಟೋರೆಂಟ್ ನ ವೆಲ್ ವ್ಯೂ ರೂಮ್ಸ್ & ಸೂಟ್ಸ್ ನಲ್ಲಿ ವಿಸ್ಕೃತ ಭವ್ಯ ಕಟ್ಟಡ ಡಿ. 3ರಂದು ಉದ್ಘಾಟಣೆಗೊಂಡಿತು.
ಕಳೆದ 4ವರ್ಷದ ಹಿಂದೆ ಪ್ರಾರಂಭ ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಜೋರ್ಡನ್ ರೆಸ್ಟೋರೆಂಟ್ ಮತ್ತು ವೆಲ್ ವ್ಯೂ ರೂಮ್ಸ್ ಗ್ರಾಹಕರ ಅನುಕೂಲಕ್ಕಾಗಿ ಸುಂದರ ಇಂಟೀರಿಯರ್, ಐಷಾರಾಮಿ ಕೋಣೆಗಳು, ಸ್ಥಳೀಯರಿಗೆ, ಪ್ರವಾಸಿಗರಿಗೆ ಅವಶ್ಯಕತೆಗಳನ್ನು ಪೂರೈಸಲು ಗ್ರಾಹಕರ ಸೇವೆಗೆ ಸದಾ ಸಿದ್ದವಾಗಿದೆ.
ಬೆಳ್ತಂಗಡಿ ಹೋಲಿ ರಿಡಿಮರ್ ಚರ್ಚ್ನ ಧರ್ಮಗುರುಗಳಾದ ವ. ಫಾ. ವಾಲ್ಟರ್ ಡಿಮೆಲ್ಲೋ ಆಶೀರ್ವಚನ ನೀಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ವಸಂತ ಬಂಗೇರ, ಉದ್ಯಮಿ ಶಶಿಧರ ಬಿ. ಶೆಟ್ಟಿ ಬರೋಡ ನವಶಕ್ತಿ, ಸುರತ್ಕಲ್ ಉದ್ಯಮಿ ಸತೀಶ್ ಮುಚ್ಚುರು , ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಕೆ.ಮೋಹನ್ ಕುಮಾರ್, ಉಪಸ್ಥಿತರಿದ್ದರು. ಜೇಮ್ಸ್ ಡಿಸೋಜಾ, ಶ್ರೀಮತಿ ಜೂಲಿಯನ್ ಡಿಸೋಜಾ,ಅಶ್ವಿನಿ ಡಿಸೋಜಾ, ಏರಿಕ್ ಡಿಸೋಜಾ, ಗೋಕುಲ್ದಾಸ್ ಭಂಡಾರ್ಕಾರ್, ರಾಜೇಶ್ ಶೆಟ್ಟಿ ನವಶಕ್ತಿ, ಗಂಗಾಧರ್ ಮಿತ್ತಮಾರು, ಪದ್ಮನಾಭ ಸಾಲಿಯಾನ್, ಕ್ಯಾಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಹೆನ್ರಿ ಲೋಬೊ, ಲ್ಯಾನ್ಸಿ ಪಿರೇರಾ, ಕ್ಯಾಥೋಲಿಕ್ ಕೋ ಆಪರೇಟಿವ್ ಸೊಸೈಟಿ ನಾರಾವಿ ಶಾಖಾ ವ್ಯವಸ್ಥಾಪಕ ವಾಲ್ತರ್ ಡಿಸೋಜಾ, ಲಾರೆನ್ಸ್ ಡೇಸಾ, ಸುಂದರ ಪೂಜಾರಿ, ಪ್ರಶಾಂತ್, ಪ್ರಭಾಕರ ಹೆಗ್ಡೆ, ಗೋಪಾಲ ಬಂಗೇರ, ಶ್ರೀಮತಿ ಜೆಸಿಂತಾ ಮೋನಿಸ್, ಬೆಳ್ತಂಗಡಿ ವರ್ತಕರ ಸಂಘದ ಸದಸ್ಯರು, ಬಾಕ್ಸ್ ವಿಶೇಷತೆಗಳು: ಡಿಲರ್ಸ್ ಮಲ್ಟಿ ಡಿಲಕ್ಸ್, ಸೂಟ್ಸ್ ರೂಮ್ಸ್, ಎಸಿ ಮತ್ತು ನಾನ್ ಎಸಿ, ವೆಜ್&ನಾನ್ವೆಜ್ ರೆಸ್ಟೋರೆಂಟ್, ಸುಸಜ್ಜಿತ, ವಿಶಾಲವಾದ, ವರ್ಣಮಯ, ಕೊಠಡಿಗಳು, ವಿಶಾಲವಾದ ಪಾರ್ಕಿಂಗ್ ಸೌಲಭ್ಯ, ಲಿಫ್ಟ್, ವೈಫೈ ಸೌಲಭ್ಯ, ಇಂಟರ್ಾಮ್, ಸುಸಜ್ಜಿತ ರಾಕ್ ಗಾರ್ಡನ್, ಅತ್ಯಾಧುನಿಕ ಕಾನ್ಸರೆನ್ಸ್ ಮೀಟಿಂಗ್ ಹಾಲ್ (ಎಸಿ), ಎಂಗೇಜ್ ಮೆಂಟ್, ಬರ್ತಡೇ ಪಾರ್ಟಿ, ಮೆಹಂದಿ ಮೊದಲಾದ ಸಭೆ ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮ ನಡೆಸಲು ಎಸಿ ಹಾಲ್, ಮುಂತಾದ ಸೌಲಭ್ಯಗಳನ್ನು ಹೊಂದಿದೆ ಎಂದು ಮಾಲಕರಾದ ಜೈಸನ್ ಡಿಸೋಜ ಆಗಮಿಸಿದ ಗಣ್ಯರನ್ನು ವಂದಿಸಿದರು.