ಬೆಳಾಲು: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ ವಾರ್ಷಿಕೋತ್ಸವವು ನ.26ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಬೆಳಾಲಿನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಸವಣಾಲು ನೆರವೇರಿಸಿದರು.
ಮುಖ್ಯ ಅಬ್ಯಾಗತರಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತತೆ ಕಾಲೇಜು ಉಜಿರೆಯ ಕನ್ನಡ ಉಪನ್ಯಾಸಕರಾದ ಡಾ.ದಿವ ಕೊಕ್ಕಡ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್.ಪದ್ಮ ಗೌಡ ರವರು ಮಾತನಾಡಿದರು.
ವೇದಿಕೆಯಲ್ಲಿ ಗೌರವ ಉಪಸ್ಥಿತಿಯಾಗಿ ತಾಲೂಕು ಮಹಿಳಾ ವೇದಿಕೆಯ ಕಾರ್ಯದರ್ಶಿಯಾದ ದಿವಿಜ ಗಣೇಶ್, ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕಾರ್ಯದರ್ಶಿ ಗಣೇಶ್, ತಾಲೂಕಿನ ವತಿಯಿಂದ ಬೆಳಾಲು ಗ್ರಾಮದ ಉಸ್ತುವಾರಿ ಉಷಾದೇವಿ ವೆಂಕಟರಮಣಗೌಡ ಕಿನ್ಯಾಜೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೆಳಾಲು ಗ್ರಾಮ ಪಂಚಾಯಿತಿನ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಬೆಳಾಲು, ಬೆಳಾಲು ಹಾಲು ಉತ್ಪಾದಕರ ಸೇವಾ ಸಂಘದ ಅಧ್ಯಕ್ಷ ಮಾಧವ ಗೌಡ ಓಣಾಜೆ ಇವರಿಗೆ ಸನ್ಮಾನ ಮಾಡಲಾಯಿತು.
ಕ್ರೀಡಾಕೂಟದ ಬಹುಮಾನವನ್ನು ಮಂಜುನಾಥ ಗೌಡ ಹೊಸಕ್ಳು, ಲೋಕಮ್ಮ ಮಂಜುನಾಥ ಗೌಡ, ಹೇಮಲತಾ ಶ್ರೀನಿವಾಸ ಗೌಡ ಗಣಪನಗುತ್ತು ವಾಚಿಸಿದರು.
ಪ್ರತಿಭಾ ಪುರಸ್ಕಾರವನ್ನು ರಕ್ಷಾ ಗಣಪನ ಗುತ್ತು, ಬೆಳ್ಳಿಯಪ್ಪ ಗೌಡ, ಲೀಲಾ ಎಸ್.ವೀರಣ್ಣ ಗೌಡ ನೆರವೇರಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಬೆಳಾಲು ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ಅಧ್ಯಕ್ಷ ವಿಜಯ ಗೌಡ ಸೌತೆಗದ್ದೆ ವಹಿಸಿದ್ದರು.ಹಾಗೂ ಈ ಸಂದರ್ಭದಲ್ಲಿ ಗೌಡರ ಯಾನೆ ಒಕ್ಕಲಿಗರ ಸ್ಪಂದನ ಸೇವಾ ಸಂಘ ಬೆಳ್ತಂಗಡಿ ವತಿಯಿಂದ ಬೆಳಾಲು ನಿವಾಸಿ ಆಶಾಲತಾ ಅಲ್ಪಕಾಲದ ಅನಾರೋಗ್ಯದಿಂದ ದೈವಾಧೀನರಾದ ಕಾರಣ ಅವರ ಮನೆಯವರಿಗೆ ರೂಪಾಯಿ 15000 ತಾಲೂಕು ಗೌಡರ ಯಾನೆ ಒಕ್ಕಲಿಗರ ಗೌರವಾಧ್ಯಕ್ಷ ಪದ್ಮ ಗೌಡ ಅವರು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಕನ್ನಿಕಾ ಪದ್ಮಗೌಡ, ಲತಾ ಕೇಶವ ಗೌಡ, ಲೀಲಾ ವೀರಣ್ಣ ಗೌಡ, ಜಯಶ್ರೀ ಮೋಹನ್ ಗೌಡ ಕಾಡ೦ಡ ನೆರವೇರಿಸಿದರು.
ವಾರ್ಷಿಕ ವರದಿಯನ್ನು ಮಹಿಳಾ ವೇದಿಕೆಯ ಕಾರ್ಯದರ್ಶಿಯಾದ ಶ್ರೀಮತಿ ಲತಾ ಕೇಶವ ಗೌಡ ವಾಚಿಸಿದರು.
ಬೆಳಾಲು ಗ್ರಾಮ ಸಮಿತಿಯ ಕಾರ್ಯದರ್ಶಿ ಧರ್ಮೇಂದ್ರ ಗೌಡ ಪುಚ್ಚೆಹಿತ್ತಿಲು ಸ್ವಾಗತಿಸಿದರು.ಧನ್ಯವಾದ ವನ್ನು ಯುವ ವೇದಿಕೆಯ ಅಧ್ಯಕ್ಷ ಉಮೇಶ್ ಜಿಎಂ ನೆರವೇರಿಸಿದರು ಹಾಗೂ ನಿರೂಪಣೆಯನ್ನು ಶೀಲಾವತಿ ಧರ್ಮೇಂದ್ರ ಗೌಡ ಪುಚ್ಚೆಹಿತ್ತಿಲು ನೆರವೇರಿಸಿದರು.