ರೈತರು ಬೆಳೆ ಗುರುತಿನ ಚೀಟಿ ಮಾಡಿಸಿಕೊಳ್ಳಲು ಮನವಿ

0

ಬೆಳ್ತಂಗಡಿ: ರೈತರು ಮಾಡಿರುವ ಹವಾಮಾನ ಆಧರಿತ ಬೆಳೆ ವಿಮೆಯ ಪರಿಹಾರ ಪಡೆಯಲು ಸರಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.ಅದರಂತೆ ‘ಫ್ರುಟ್ಸ್ ಐಡಿ’ (ಬೆಳೆ ಗುರುತಿನ ಚೀಟಿ) ಕಡ್ಡಾಯವಾಗಿದೆ. ಮುಂದಿನ ತಿಂಗಳಿನಿಂದ ಅಡಿಕೆ ಕೊಳೆರೋಗದ ಪರಿಹಾರ ಬಿಡುಗಡೆಯಾಗಲಿದ್ದು ಇನ್ನು ಮುಂದೆ ಈ ಪ್ರುಟ್ಸ್ ಐಡಿ ಹೊಂದಿರದ ರೈತರ ಖಾತೆಗೆ ಪರಿಹಾರ ಮೊತ್ತ ಜಮೆಯಾಗುವುದಿಲ್ಲ.

ಆದ್ದರಿಂದ ರೈತರು ತ್ವರಿತವಾಗಿ ”ಬೆಳೆ ಗುರುತಿನ ಚೀಟಿ” ಮಾಡಿಸಿಕೊಳ್ಳುವಂತೆ ರೈತ ಸಂಘ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ವಿನಂತಿಸಿದ್ದಾರೆ.

ಒಬ್ಬ ರೈತ ಬೇರೆ ಬೇರೆ ಕಡೆ ಜಮೀನು ಹೊಂದಿದ್ದಲ್ಲಿ ಸ್ವಯಂ ಘೋಷಿತ ಪತ್ರ ನೀಡಿ ಬೆಳೆ ಗುರುತಿನ ಚೀಟಿ ಒಟ್ಟಾಗಿ ಪಡೆದುಕೊಳ್ಳಬಹುದು.

ಗುರುತಿನ ಚೀಟಿ ಪಡೆದುಕೊಳ್ಳಲು: ಖಾತೆದಾರನ ಆಧಾರ್ ನಂಬ್ರ, ರಾಷ್ಟ್ರೀಕೃತ ಬ್ಯಾಂಕ್‌ನ ಚಾಲ್ತಿ ಎಕೌಂಟ್ ನಂಬ್ರ RTC ಯ ಸರ್ವೆ ನಂಬ್ರ ಪಹಣಿಯಲ್ಲಿ ಜಂಟಿ ಖಾತೆ ಹೊಂದಿದ್ದಲ್ಲಿ RTC ಯಲ್ಲಿರುವ ಎಲ್ಲರ ಆಧಾರ್ ಅವಶ್ಯ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ನಂಬ್ರ 9686325055 ಅಥವಾ ಸ್ಥಳೀಯ ಕಂದಾಯ ಇಲಾಖೆಯ/ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸುವುದು ಎಂದು ಸುರೇಶ್ ಭಟ್ ಕೊಜಂಬೆ ತಿಳಿಸಿದ್ದಾರೆ.

p>

LEAVE A REPLY

Please enter your comment!
Please enter your name here