


ಬೆಳಾಲು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ, ಉಜಿರೆ ವಲಯದ, ಬೆಳಾಲು ಕಾರ್ಯಕ್ಷೇತ್ರದ ಭಾಗ್ಯೋದಯ ಸ್ವ-ಸಹಾಯ ಸಂಘದ ಸದಸ್ಯರಾದ ಕು. ಗೀತಾರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಖಾವಂದರು ವಿಶೇಷವಾಗಿ ಮಂಜೂರು ಮಾಡಿರುವ ಯು ಶೇಪ್ ವಾಕರನ್ನು ಬೆಳಾಲು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ್ ಬಾರಿತಾಯರವರು ವಿತರಿಸಿದರು,


ಈ ಸಂದರ್ಭ ಜನಜಾಗೃತಿ ವೇದಿಕೆಯ ತಾಲೂಕು ಸಮಿತಿಯ ಸದಸ್ಯರಾದ ಯೋಗೀಶ್ ಗೌಡ,”ಶೌರ್ಯ” ವಿಪತ್ತು ಘಟಕದ ಕ್ಯಾಪ್ಟನ್ ಸಂತೋಷ್ ಬೆಳಾಲ್, ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಯುತ ತಾರಾನಾಥ್, ಛತ್ರಪತಿ ಶಿವಾಜಿ ಭಜನಾ ಮಂಡಳಿಯ ಅಧ್ಯಕ್ಷ ಪ್ರಶಾಂತ್, ತಾಲೂಕಿನ ಕೃಷಿ ಅಧಿಕಾರಿ ರಾಮ್ ಕುಮಾರ್, ಉಜಿರೆ ವಲಯದ ಮೇಲ್ವಿಚಾರಕಿ ವನಿತಾ, ಸೇವಾ-ಪ್ರತಿನಿಧಿ ಆಶಾ, ಕು.ಧನ್ಯರವರು ಉಪಸ್ಥಿತರಿದ್ದರು.


            





