ಪೆಟ್ರೋನೆಟ್ ಎಂ.ಎಚ್.ಬಿ ಲಿಮಿಟೆಡ್ ನಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್, ಲೇಖನ ಸಾಮಾಗ್ರಿಗಳ ವಿತರಣೆ

0

ಪುದುವೆಟ್ಟು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಎಂ.ಎಚ್.ಬಿ ಪೆಟ್ರೋನೆಟ್ ಲಿಮಿಟೆಡ್ ನೆರಿಯ ಇವರ ವತಿಯಿಂದ ಉಚಿತವಾಗಿ ಶಾಲಾ ಬ್ಯಾಗ್ ಹಾಗೂ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗಿರೀಶ್ ಕುದ್ರಂತಾಯ, ಪೆಟ್ರೋನೆಟ್ ಎಂ.ಎಚ್.ಬಿ ಲಿಮಿಟೆಡ್ ನೆರಿಯಾದ ಪ್ರಬಂಧಕ ಸೆಂತಿಲ್, ಶಾಲೆಯ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಟಿಕ್ಕ ಸಾಹೇಬ್, ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪಗೌಡ, ಶಾಲೆಯ ಹಿರಿಯ ಶಿಕ್ಷಕಿ ತೇಜಾವತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಗಿರೀಶ್ ಕುದ್ರಂತಾಯ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ತನಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಕಾರವನ್ನು ನೀಡುವುದಾಗಿ ತಿಳಿಸಿದರು.ಶಾಲೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪ್ರಯತ್ನದಿಂದ ಈ ವರ್ಷ ಶಾಲಾ ದಾಖಲಾತಿಯಲ್ಲಿ ಬಹಳಷ್ಟು ಏರಿಕೆಯಾಗಿರುವುದು ತುಂಬಾನೇ ಸಂತೋಷದಾಯಕವಾದ ವಿಚಾರ ಎಂದು ತಿಳಿಸಿದರು.

ಪೆಟ್ರೋನೇಟ್ ಲಿಮಿಟೆಡ್ ನೆರಿಯದ ಪ್ರಬಂಧಕ ಸೆಂತಿಲ್ ರವರು ಮಾತನಾಡಿ ಪುದುವೆಟ್ಟು ಗ್ರಾಮದಾದ್ಯಂತ ಹಾದು ಹೋಗಿರುವಂತಹ ಪೆಟ್ರೋಲಿಯಂ ಪೈಪ್ ಲೈನ್ ನ ಬಗ್ಗೆ ಕಾರ್ಯಕ್ರಮಕ್ಕೆ ಆಗಮಿಸಿದ ಪೋಷಕರಿಗೆ ಜಾಗೃತಿ ಮೂಡಿಸಿದರು.ಶಾಲೆಯಲ್ಲಿ ಕಲಿಯುವಂತ ವಿದ್ಯಾರ್ಥಿಗಳಿಗೆ ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲ ರೀತಿಯ ಸಹಕಾರವನ್ನು ಇನ್ನು ಮುಂದೆಯೂ ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದ ಟಿಕ್ಕಾ ಸಾಹೇಬ್ ರವರು ಈ ವರ್ಷ ನಡೆದಂತಹ ಪ್ರತಿಭಾ ಕಾರಂಜಿ ಹಾಗೂ ಶಾಲಾ ಕ್ರೀಡಾಕೂಟಗಳಲ್ಲಿ ನಮ್ಮ ಶಾಲೆ ವಿದ್ಯಾರ್ಥಿಗಳು ಅತ್ಯಂತ ಹೆಚ್ಚಿನ ಪರಿಶ್ರಮವನ್ನು ಪಟ್ಟು ಬಹಳಷ್ಟು ಬಹುಮಾನಗಳನ್ನು ತಂದು ತಾಲೂಕು ಮಟ್ಟದಲ್ಲಿ ನಮ್ಮ ಶಾಲೆಯ ಹೆಸರನ್ನು ಗುರುತಿಸುವಂತೆ ಮಾಡಿರುವುದು ಅತೀವ ಸಂತೋಷವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶೀನಪ್ಪಗೌಡ ರವರು ಈ ವರ್ಷ ನಮ್ಮ ಶಾಲೆಯಲ್ಲಿ ಆಯೋಜಿಸಿರುವಂತಹ ಕಾರ್ಯಕ್ರಮಗಳ ಬಗ್ಗೆ ಆಗಮಿಸಿರುವಂತಹ ಪೋಷಕರಿಗೆ ತಿಳಿಸಿದರು.ನಿಮ್ಮೆಲ್ಲರ ಸಹಕಾರದಿಂದ ನಮ್ಮ ಶಾಲೆಯಲ್ಲಿ ಹೆಚ್ಚಿನ ಮಕ್ಕಳು ದಾಖಲಾತಿ ಆಗುವಂತೆ ಶ್ರಮಿಸಬೇಕು ಎಂದು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಆಗಮಿಸಿದ ಎಲ್ಲ ಗಣ್ಯರನ್ನು ಶಾಲಾ ಶಿಕ್ಷಕರಾದಂತಹ ಪವನ್ ಕುಮಾರ್ ಸ್ವಾಗತಿಸಿ, ತೇಜಾವತಿಯವರು ಧನ್ಯವಾದಗೈದ ಕಾರ್ಯಕ್ರಮವನ್ನು ಶಾಲಾ ಶಿಕ್ಷಕ ನಿಶಾಂತ್ ಕುಮಾರ್ ರವರು ನಿರೂಪಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಶಿಕ್ಷಕರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕಾರವನ್ನು ನೀಡಿದರು.

LEAVE A REPLY

Please enter your comment!
Please enter your name here