ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾಪೂಜೆ ಬಲೀಂದ್ರ ಪೂಜೆ

0

ನಾಳ : ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನ.13 ರಂದು ರಾತ್ರಿ ಗಂಟೆ 7.30 ಕ್ಕೆ ಶ್ರೀ ದೇವರಿಗೆ ರಾತ್ರಿ ಮಹಾಪೂಜೆ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಲೀಂದ್ರ ಪೂಜೆ ಮತ್ತು ಕ್ಷೇತ್ರದ ದೈವಗಳಿಗೆ ವಿಶೇಷ ಪರ್ವ ಸೇವೆ ಜರಗಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣ ನೇತೃತ್ವದಲ್ಲಿ ಪೂಜಾ ವೈಧಿಕ-ವಿಧಾನಗಳೊಂದಿಗೆ ನೆರವೇರಿತು.

ದಿನವಿಡೀ ವಿವಿಧ ಬಗೆಯ ವಾಹನ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ,ಸದಸ್ಯರಾದ ದಿನೇಶ್ ಗೌಡ ಕಲಾಯಿತೊಟ್ಟು.,ಉಮೇಶ್ ಕೇಲ್ದಡ್ಕ,ರಾಜೇಶ್ ಶೆಟ್ಟಿ ಅಡ್ಡಕೊಡಂಗೆ,ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ.,ಹಿರಿಯರಾದ ಚಂದಯ್ಯ ಶೆಟ್ಟಿ ರಾಯಿಮಾರು,ಕಚೇರಿ ಪ್ರಬಂಧಕ ಗಿರೀಶ್ ಶೆಟ್ಟಿ ಗೇರುಕಟ್ಟೆ, ಸ್ಥಳೀಯ ಆಶೋಕ ಆಚಾರ್ಯ ಗಂಪದಕೋಡಿ,ವಸಂತ ಆಚಾರ್ಯ ಗಂಪದಕೋಡಿ,ಸೋಮಪ್ಪ ಗೌಡ ಕುಬಾಯ,ಗಣೇಶ್ ಗೌಡ ನಾಳ,ಬಾಲಕೃಷ್ಣ ಮಜಲು,ಜಯಚಂದ್ರ ಆಚಾರ್ಯ ಗಂಪದಕೋಡಿ, ಲೋಕೇಶ್ ಎನ್,ಜಗನ್ನಾಥ ಎಂ,ಅಕ್ಷತ್ ನಾಳ,ಶ್ರೀಮತಿ ಬೇಬಿ ನಾಳ,ಶ್ರೀಮತಿ ಪುಷ್ಪವತಿ ನಾಳ,ಅರ್ಚಕರು,ಸಿಬ್ಬಂದಿಗಳು, ಭಜನಾ ಮಂಡಳಿ ಪದಾಧಿಕಾರಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here