ಬೆಳ್ತಂಗಡಿ: ದೀಪಾವಳಿ ಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಯುವ ಮೋರ್ಚಾದಿಂದ ವತಿಯಿಂದ ನಡೆದ 4 ನೇ ವರ್ಷದ ದೋಸೆ ಹಬ್ಬದ ಸಮಾರೋಪ ಸಮಾರಂಭ ನ.13 ರಂದು ಸಂಜೆ ನಡೆಯಿತು.
ಈ ಸಂದರ್ಭದಲ್ಲಿ ಗೋ ಮಾತೆಗೆ ಪೂಜೆ, ಬಿಜೆಪಿ ಕಮಲದಲ್ಲಿ ಅರಳಿತ ಹಣತೆಗಳ ಚಿತ್ತಾರ, ಬೆಳ್ತಂಗಡಿ ಪೇಟೆಯಲ್ಲಿ ಅತ್ಯಾಕರ್ಷಕ ದೀಪಾಲಂಕಾರ, ವಿವಿಧ ಭಜನಾ ತಂಡಗಳಿಂದ ಕುಣಿತಾ ಭಜನೆ ಜರಗಿತು.
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ವಿಶಿಷ್ಟ ಪರಿಕಲ್ಪನೆಯೊಂದಿಗೆ ದೋಸೆ ಹಬ್ಬವನ್ನು ಮಾಡಿದ ಶಾಸಕ ಹರೀಶ್ ಪೂಂಜ ರಾಜ್ಯಕ್ಕೆ ಮಾದರಿಯಾಗಿದೆ.ನಮ್ಮ ತುಳುನಾಡಿನ ಸಂಸ್ಕೃತಿ ಆಚರಣೆಗಳನ್ನು ಉಳಿಸಲು ಯುವ ಮೋರ್ಚ್ ಹಮ್ಮಿಕೊಂಡ ಈ ದೋಸೆ ಹಬ್ಬದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಹರೀಶ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.ಯುವ ಮೋರ್ಚಾ ತಾಲೂಕು ಅಧ್ಯಕ್ಷ ಯಶವಂತ ಬೆಳಾಲು ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಭಾರತೀಯ ಜನತಾ ಪಾರ್ಟಿಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಬೃಜೇಶ್ ಚೌಟ, ಭಾರತೀಯ ಜನತಾ ಪಾರ್ಟಿಯ ಕಿಶೋರ್ ಬೊಟ್ಯಾಡಿ, ಬೆಳ್ತಂಗಡಿ ಮಂಡಲದ ಅಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ರಾಜ್ಯ ರೈತಮೊರ್ಚಾದ ಉಪಾಧ್ಯಕ್ಷ ರೇಣುಕಾಪ್ರಸಾದ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಜಯಾನಂದ ಗೌಡ, ಯುವಮೊರ್ಚಾ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ ಉಮೇಶ್ ಕುಲಾಲ್ ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಉಪಾಧ್ಯಕ್ಷ ಸೀತರಾಮ್ ಬಿ. ಎಸ್.ಬೆಳಾಲ್, ಕಾರ್ಯಕ್ರಮ ನಿರೂಪಿಸಿದರು.