ಬೆಳ್ತಂಗಡಿ :ಬೆಂಗಳೂರು ಬಿಲ್ಲವ ಅಸೋಸಿಯೇಷನ್ ವತಿಯಿಂದ ನಡೆದ ಸುವರ್ಣ ಸಂಭ್ರಮದ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿಯ ದಿನದಂದು ನಡೆದ ಕಾರ್ಯಕ್ರಮದಲ್ಲಿ ಸೆ. 14ರಂದು ಬೆಂಗಳೂರು ಬಿಲ್ಲವರ ಅಸೋಸಿಯೇಷನ್ ಮಾಜಿ ಅಧ್ಯಕ್ಷರ ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ಪೀತಾಂಬರ ಹೇರಾಜೆ ಅವರನ್ನು ಬೆಂಗಳೂರು ಬಿಲ್ಲವ ಭವನದಲ್ಲಿ ಅಭಿನಂದಿಸಲಾಯಿತು.
ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಮಠಾಧಿಪತಿ ವಿಖ್ಯಾತರಂದ ಸ್ವಾಮೀಜಿ, ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ ನೆಕ್ಕಿದಪುಣಿ, ಅಧ್ಯಕ್ಷ ಎಮ್. ವೇದ ಕುಮಾರ, ಹಿರಿಯ ಉಪಾಧ್ಯಕ್ಷ ಕೇಶವ ಪೂಜಾರಿ, ಉಪಾಧ್ಯಕ್ಷೆ ಜಯಂತಿ ವಿಜಯ ಕೃಷ್ಣ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಕೋಶಾಧಿಕಾರಿ ಜಯನಂದ ಪೂಜಾರಿ, ಜೊತೆ ಕಾರ್ಯದರ್ಶಿ ಎಂ. ಕೆ. ದಾಮೋದರ್ ಸುವರ್ಣ, ಸಂಘಟನಾ ಕಾರ್ಯದರ್ಶಿ ಕೆ ನಾರಾಯಣ ಪೂಜಾರಿ, ಮಹಿಳಾ ಅಧ್ಯಕ್ಷೆ ಹರಿಣಿ ಹಾಗೂ ಇತರ ಗಣ್ಯರೂ ಉಪಸ್ಥಿತರಿದ್ದರು.