ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಸುವರ್ಣ ಮಹೋತ್ಸವ ವರ್ಷ ದ ಸೇವಾ ಚಟುವಟಿಕೆ ವಿಸ್ತರಣೆಯ ಅಂಗವಾಗಿ ಲಯನ್ಸ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ ದಂದು ಬೆಳ್ತಂಗಡಿ ಮಾದರಿ ಶಾಲೆಗೆ ಶುದ್ಧ ನೀರು ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು.
ಬೆಳ್ತಂಗಡಿ ಲಯನ್ಸ್ ಸ್ಥಾಪಕ ಸದಸ್ಯ, ಆರ್ಯಭಟ ಪ್ರಶಸ್ತಿ ಪುರಸ್ಕೃತ ವಿ.ಆರ್ ನಾಯ್ಕ್ ಅವರ ಪ್ರಾಯೋಜಕತ್ವ ದಲ್ಲಿ ಈ ಯಂತ್ರವನ್ನು ಜಿಲ್ಲಾ ರಾಜ್ಯಪಾಲ ಡಾ.ಮೆಲ್ವಿನ್ ಡಿಸೋಜಾ ಮತ್ತು ಲಯನ್ಸ್ ಜಿಲ್ಲೆಯ ಪ್ರಥಮ ಮಹಿಳೆ ಸ್ಮಿತಾ ಡಿಸೋಜಾ ಶಾಲೆಗೆ ಹಸ್ತಾಂತರಿಸಿದರು.
ಕೊಡುಗೆ ಸ್ವೀಕರಿಸಿದ ಶಾಲಾ ಮುಖ್ಯೋಪಾಧ್ಯಾಯ ಸೂರ್ಯನಾರಾಯ ಭಟ್ ಅವರು ಕೃತಜ್ಞತೆ ಸಲ್ಲಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಪುಟ ಕಾರ್ಯದರ್ಶಿ ಓಸ್ವಾಲ್ಡ್ ಡಿಸೋಜಾ, ಲಿಯೋ ವಿಭಾಗದ ಅಧ್ಯಕ್ಷೆ ಡಾ. ಕಾವು ರಂಜಿತಾ ಶೆಟ್ಟಿ, ಪ್ರಮುಖರಾದ ವಿ.ಆರ್ ನಾಯ್ಕ್,
ಲಯನ್ಸ್ ಕ್ಲಬ್ ಕಾರ್ಯದರ್ಶಿ ಅನಂತಕೃಷ್ಣ, ಕೋಶಾಧಿಕಾರಿ ಶುಭಾಷಿಣಿ, ಪ್ರಮುಖರಾದ ಬಿ.ಪಿ ಅಶೋಕ್ ಕುಮಾರ್, ಅಶ್ರಫ್ ಆಲಿಕುಂಞಿ, ಮೇದಿನಿ ಡಿ ಗೌಡ, ದತ್ತಾತ್ರೇಯ ಗೊಲ್ಲ, ಜಯರಾಂ ಭಂಡಾರಿ, ಜಗನ್ನಾಥ ಶೆಟ್ಟಿ, ಶಾಲಾ ಶಿಕ್ಷಕ ವೃಂದದವರಾದ ರೇಣುಕಾ, ಅಕ್ಷತಾ, ಸವಿತಾ, ಜಯಶ್ರೀ, ಚಿತ್ರಾ, ಪ್ರಶಿಕ್ಷಣಾರ್ಥಿ ಪ್ರಮೀಳಾ ಉಪಸ್ಥಿತರಿದ್ದರು.
ಧರಣೇಂದ್ರ ಕೆ ಜೈನ್ ಕಾರ್ಯಕ್ರಮ ಸಂಯೋಜಿಸಿದರು.ಸುರೇಶ್ ಶೆಟ್ಟಿ ಲಾಯಿಲ ವಂದಿಸಿದರು.