ಕಣಿಯೂರು: 2023-24ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಯೋಜನೆಯಡಿ ಕಣಿಯೂರು ಜಲಾನಯನ ಸಮಿತಿ ವ್ಯಾಪ್ತಿಯ ರೈತ ಫಲಾನುಭವಿಗಳಿಗೆ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಅ.30ರಂದು ನಡೆಯಿತು.
ಶ್ಯಾಮ್ ಭಟ್ ಜೇನು ಕೃಷಿ ಬಗ್ಗೆ ಕೃಷಿಕರಿಗೆ ಮಾಹಿತಿಯನ್ನು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಲಾನಯನ ಸಮಿತಿ ಸದಸ್ಯರು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್, ಕೃಷಿ ಅಧಿಕಾರಿ ಚಿದಾನಂದ ಎಸ್.ಹೂಗಾರ್ ಹಾಗೂ ಪದ್ಮಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಭಾಗವಹಿಸಿದ್ದರು.
ಸುಮಾರು 100ಕ್ಕೂ ಹೆಚ್ಚಿನ ರೈತ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ಅಲ್ಯೂಮಿನಿಯಂ ಏಣಿ, ಫೈಬರ್ ದೋಟಿ, ಹಾಳೆ ತಟ್ಟೆಯಂತ್ರ, ಮೇವಿನ ಬೀಜ, ತರಕಾರಿ ಬೀಜ ಮತ್ತು ಜೇನುಪೆಟ್ಟಿಗೆಗಳನ್ನು ವಿತರಿಸಲಾಯಿತು.
p>