ರಾಷ್ಟ್ರಮಟ್ಟದ ನೃತ್ಯೋತ್ಸವ-ಭರತನಾಟ್ಯ ಸ್ಪರ್ಧೆಯಲ್ಲಿ ಉಜಿರೆಯ ಧರಿತ್ರಿ ಭಿಡೆ ದ್ವಿತೀಯ ಸ್ಥಾನ

0

ಉಜಿರೆ: ಶ್ರೀದೇವಿ ನೃತ್ಯ ಕೇಂದ್ರವು ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ನೃತ್ಯೋತ್ಸವ-2023 ಭರತನಾಟ್ಯ ಸ್ಪರ್ಧೆಯಲ್ಲಿ ಕಲ್ಮಂಜ ಗ್ರಾಮದ ಆನಂಗಳ್ಳಿಯ ಧರಿತ್ರಿ ಭಿಡೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಇವರು ಮಂಗಳೂರಿನ ವಿದುಷಿ ಸುಮಂಗಲಾ ರತ್ನಾಕರ ರಾವ್ ಅವರ ಶಿಷ್ಯೆಯಾಗಿದ್ದು, ಭರತನಾಟ್ಯ ಸೀನಿಯರ್ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿ ಗಳಿಸಿ, ಪ್ರಸ್ತುತ ವಿದ್ವತ್ಪೂರ್ವ ಕಲಿಕೆಯನ್ನು ಮುಂದುವರಿಸಿದ್ದಾರೆ.

ಉಜಿರೆಯ ಎಸ್ ಡಿಎಂ ಸ್ವಾಯತ್ತ ಕಾಲೇಜಿನ ಮೊದಲ ವರ್ಷದ ಬಿ ಕಾಂ ವಿದ್ಯಾರ್ಥಿಯಾಗಿರುವ ಇವರು ಉಜಿರೆಯ ಪತ್ರಿಕಾ ವಿತರಕ ಧನಂಜಯ ಭಿಡೆ ಕಲ್ಮಂಜ ಮತ್ತು ಚಿತ್ರಾ ಭಿಡೆ ದಂಪತಿಯ ಪುತ್ರಿ.

p>

LEAVE A REPLY

Please enter your comment!
Please enter your name here