ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರ ನೇತೃತ್ವದಲ್ಲಿ ಅ.28ರಂದು ಹೆಚ್.ಐ.ವಿ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಸಾಂತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಲಾಗಿತ್ತು.
ಅತಿಥಿಗಳಾಗಿ ಡಾಕ್ಟರ್ ರಂಜನ್ ಭಟ್ ಇವರು ಪೌಷ್ಟಿಕ ಆಹಾರ ವಿತರಿಸಿ ಮನುಷತ್ವದ ನೆಲೆಯಲ್ಲಿ ಸಂಸ್ಥೆಯ ಮೂಲಕ ನಡೆಸುವ ಕಾರ್ಯ ಕ್ರಮಕ್ಕೆ ಅಭಿನಂದನೆ ಸಲ್ಲಿಸಿ ಮುಂದಿನ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಪುಷ್ಪ ರಾಜ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಿ.ಕೆ.ಆರ್. ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಎ.ಜೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವು ನಿರಂತರವಾಗಿ ದೇವರ ಕರುಣೆಯಿಂದ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ಬಿ ಎಸ್ ಡಬ್ಲ್ಯೂ ವಿಧ್ಯಾರ್ಥಿಗಳಾದ ಕುಮಾರಿ ಕಾವ್ಯ, ಕುಮಾರಿ ಸುಶ್ಮಿತಾ,ಕುಮಾರಿ ಲೀಕ್ಷಾ ಮತ್ತು ಕುಮಾರಿ ಪ್ರತೀಕ್ಷಾ ವಿವಿಧ ಚಟುವಿಕೆಗಳ ಮೂಲಕ ಕ್ಯಾನ್ಸೆರ್ ತರಬೇತಿಯ ಮಾಹಿತಿ ನೀಡಿದರು.
ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿನಿ ಕುಮಾರಿ ಕಾವ್ಯ ರವರು ಎಲ್ಲರನ್ನು ಸ್ವಾಗತಿಸಿ, ಕುಮಾರಿ ಲೀಕ್ಷಾ ಇವರು ವಂದಿಸಿದರು.
ಕಾರ್ಯಕ್ರಮವನ್ನು ಮಾರ್ಕ್ ಡಿಸೋಸರವರು ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.