ಉಜಿರೆ: ಎಸ್.ಡಿ.ಎಮ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಭೆ- ಹದಿ ಹರೆಯದಲ್ಲಿ ಮಕ್ಕಳನ್ನು ನಿಮ್ಮ ಸ್ನೇಹಿತರಂತೆ ಕಾಣಿ- ಡಾ.ಅಕ್ಷತಾ ಕೆ

0

ಉಜಿರೆ: ಚಿಕ್ಕವರಿದ್ದಾಗ ನಾವು ಮಕ್ಕಳನ್ನು ಹೇಗೆ ಪ್ರೀತಿ ವಾತ್ಸಲ್ಯದಿಂದ ಹಾಗೂ ಸಂದರ್ಭಕ್ಕೆ ತಕ್ಕಂತೆ ಗದರುತ್ತೇವೆಯೋ,ಅದೇ ರೀತಿ ಅವರು ಹದಿ ಹರೆಯಕ್ಕೆ ಬಂದಾಗ ಅವರನ್ನು ಬಹಳ ಸೂಕ್ಷ್ಮವಾಗಿ ಒಬ್ಬ ಸ್ನೇಹಿತನಂತೆ ಕಾಣಬೇಕಾಗುತ್ತದೆ ಎಂದು ಎಸ್.ಡಿ.ಎಮ್ ಸ್ನಾತಕೋತ್ತರ ಕಾಲೇಜಿನ ಎಮ್ ಎಸ್ ಡಬ್ಲ್ಯೂ ವಿಭಾಗದ ಪ್ರಾಧ್ಯಾಪಕಿ ಡಾ|ಅಕ್ಷತಾ ಕೆ ಹೇಳಿದರು.

ಅವರು ಎಸ್.ಡಿ.ಎಮ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕ-ರಕ್ಷಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಮಕ್ಕಳು ಹದಿ ಹರೆಯಕ್ಕೆ ಬಂದಾಗ ಅವರ ಜೊತೆ ಪಾಲಕರು ಬಹಳ ಸಂಯಮದಿಂದ ವರ್ತಿಸಬೇಕಾಗುತ್ತದೆ ಏಕೆಂದರೆ ಮಕ್ಕಳು ಹದಿ-ಹರೆಯಕ್ಕೆ ಕಾಲಿಟ್ಟಾಗ ಅವರಲ್ಲಿ ಉಂಟಾಗುವ ದೈಹಿಕ-ಮಾನಸಿಕ ಬದಲಾವಣೆಯಿಂದ ಅವರು ಚಿಕ್ಕ ಪುಟ್ಟ ವಿಷಯಗಳಿಗೂ ಉದ್ವೇಗ, ಕೋಪಗೊಳ್ಳುವ ಸಾಧ್ಯತೆ ಇರುತ್ತದೆ ಆವಾಗ ಪಾಲಕರೂ ಸಹ ಅವರ ಜೊತೆ ಅಸಹನೆ ಇಂದ ವರ್ತಿಸಿದರೆ ಅಲ್ಲಿ ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇರುತ್ತದೆ.ಅಷ್ಟೇ ಅಲ್ಲದೇ ಮಕ್ಕಳು ಪಾಲಕರನ್ನು ದ್ವೇಷಿಸುವ ಸಾಧ್ಯತೆಯೂ ಸಹ ಇರಬಹುದು.

ಆದ್ದರಿಂದ ಪಾಲಕರು ತಮ್ಮ ಮಕ್ಕಳ ಜೊತೆ ಉತ್ತಮ ಸಂಹನದ ಮೂಲಕ,ಅವರ ಆಸೆ ಆಕಾಂಕ್ಷೆಗಳನ್ನು ಮುಕ್ತವಾಗಿ ಚರ್ಚಿಸಿ ಸರಿ ತಪ್ಪುಗಳ ಬಗ್ಗೆ ಅವರಿಗೆ ಸರಿಯಾಗಿ ಮನವರಿಕೆ ಮಾಡಿದಾಗ ಅವರು ತಮ್ಮ ಉತ್ತಮ ಭವಿಷ್ಯದ ಕಡೆಗೆ ಹೆಚ್ಚು ಗಮನಹರಿಸಲು ಸಹಾಯವಾಗುತ್ತದೆ.ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಶಿಸ್ತು,ಸಂಸ್ಕಾರವನ್ನೂ ಸಹ ಕಲಿಸುವ ಜವಾಬ್ಧಾರಿಯನ್ನು ಪಾಲಕರು ಸೂಕ್ತವಾಗಿ ಹೇಗೆ ನಿರ್ವಹಿಸಬಹುದು ಎಂಬುದನ್ನು ಹಲವಾರು ದೃಷ್ಟಾಂತದ ಮೂಲಕ ಪಾಲಕರಿಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಮಾತನಾಡಿ ಪೋಷಕರು ಮಕ್ಕಳನ್ನು ಕೇವಲ ಕಾಲೇಜಿಗೆ ಕಳುಹಿಸಿದರೆ ಮಾತ್ರ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಕೊಂಡರೆ ತಪ್ಪಾಗುತ್ತದೆ, ಕಾಲ-ಕಾಲಕ್ಕೆ ಮಕ್ಕಳ ಕಲಿಕಾ ಪ್ರಗತಿಯ ಜೊತೆಗೆ ಅವರಲ್ಲಿ ಉಂಟಾಗುವ ಮನೋ-ದೈಹಿಕ ಬೆಳವಣಿಗೆಯ ಬಗ್ಗೆಯೂ ತಮ್ಮ ಗಮನಹರಿಸುತ್ತಿರಬೇಕಾಗುತ್ತದೆ ಆ ಉದ್ದೇಶಕ್ಕಾಗಿಯೇ ಇಂತಹ ಶಿಕ್ಷಕ-ರಕ್ಷಕ ಸಭೆಯನ್ನು ನಡೆಸಲಾಗುತ್ತದೆ ಎಂದು ಶಿಕ್ಷಕ-ರಕ್ಷಕ ಸಭೆಯ ಉದ್ದೇಶಗಳ ಬಗ್ಗೆ ಹಾಗೂ ಮಕ್ಕಳ ಸರ್ವಾಂಗಿಣ ಬೆಳವಣಿಗೆಯಲ್ಲಿ ಶಿಕ್ಷಕರ ಜೊತೆಗೆ ಪೋಷಕರ ಪಾತ್ರದ ಮಹತ್ವವನ್ನು ವಿವರಿಸಿದರು.

ಶಿಕ್ಷಕ-ರಕ್ಷಕ ಸಭೆಯ ಸಂಪೂರ್ಣ ಜವಾಬ್ದಾರಿಯನ್ನು ಅರ್ಥಶಾಸ್ತ್ರ ಉಪನ್ಯಸಕಿ ವಿಜಯಲಕ್ಷ್ಮಿ ವಹಿಸಿಕೊಂಡರೆ, ಸಭಾ ಕಾರ್ಯಕ್ರಮ ನಿರ್ವಹಣೆಯನ್ನು ಕನ್ನಡ ಉಪನ್ಯಾಸಕ ಮಹಾವೀರ ಜೈನ್ ನಡಿಸಿಕೊಟ್ಟರು.ಭೌತಶಾಸ್ತ್ರ ಉಪನ್ಯಸಕಿ ಸವಿತಾ ಬಿ ಸರ್ವರನ್ನೂ ಸ್ವಾಗತಿಸಿ, ಭೌತಶಾಸ್ತ್ರ ಉಪನ್ಯಾಸಕ ಲಕ್ಷ್ಮೀಶ್ ಭಟ್ ಅತಿಥಿ ಪರಿಚಯ ನಡೆಸಿ, ಭೌತಶಾಸ್ತ್ರ ಉಪನ್ಯಾಸಕಿ ಪ್ರಶಾಂತಿ ಎ ಸರ್ವರನ್ನೂ ವಂದಿಸಿದರು.

p>

LEAVE A REPLY

Please enter your comment!
Please enter your name here