


ಬೆಳಾಲು: ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಗತಂಬಿಲ, ಆಯುಧ ಪೂಜೆ (ವಾಹನ ಪೂಜೆ), ನವರಾತ್ರಿ ವಿಶೇಷ ಪೂಜೆ ಅ.23ರಂದು ಆರಿಕೋಡಿ ಶ್ರೀ ಕ್ಷೇತ್ರದಲ್ಲಿ ಜರುಗಿತು.



ಈ ಸಂದರ್ಭದಲ್ಲಿ ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಪೆನ್ನು,ಮತ್ತು ಬಳಪ ವಿತರಣೆ, ಮಹಿಳೆಯರಿಗೆ ರವಿಕೆ ಕಣ ಮತ್ತು ಬಳೆ ವಿತರಣೆ ಹಾಗೂ ವಿವಿಧ ವಾಹನ ಪೂಜೆ ವಿಜೃಂಭಣೆಯಿಂದ ನಡೆಯಿತು.

ಶ್ರೀ ಕ್ಷೇತ್ರದ ಸಿಬ್ಬಂದಿಗಳು, ಸ್ವಯಂ ಸೇವಕರು ಹಾಗೂ ಭಕ್ತಾದಿಗಳು ಭಾಗವಹಿಸಿದರು.ಭಕ್ತಾದಿಗಳಿಗೆ ಅನ್ನದಾನ ಸೇವೆ ನಡೆಯಿತು.








