


ಬೆಳ್ತಂಗಡಿ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ 45ನೇ ವರ್ಷದ ಶ್ರೀ ಶಾರದಾ ಪೂಜೋತ್ಸವವನ್ನು ರೈತ ಬಂಧು ಆಹಾರೋದ್ಯಮದ ಮುಖ್ಯಸ್ಥ ಶಿವಶಂಕರ್ ಭಟ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.



ಸಮಿತಿಯ ಗೌರವಾಧ್ಯಕ್ಷ ಮುಗುಳಿ ನಾರಾಯಣ ರಾವ್, ಅಧ್ಯಕ್ಷ ಮುರಳೀಧರ, ಕಾರ್ಯದರ್ಶಿ ನಾರಾಯಣ ಶೆಟ್ಟಿ, ಉಪಾಧ್ಯಕ್ಷ ಸುರೇಂದ್ರ ಕೋಟ್ಯಾನ್, ಸಂಜೀವ ಎನ್, ಕೋಶಾಧಿಕಾರಿ ಜನಾರ್ದನ, ಗೌರವ ಸಲಹೆಗಾರ ಗಣೇಶ್ ಐತಾಲ್, ಸದಸ್ಯರಾದ ಕುಮಾರ್ ದಾಸ್ ಮತ್ತು ಜಿವಿ ಹರೀಶ್ ಸವಣಾಲು ಉಪಸ್ಥಿತರಿದ್ದರು.








