ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಉಜಿರೆ ಶ್ರೀಧ ಮ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನಗಳ ವಿಶೇಷ ಶಿಬಿರದ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅನಂತೋಡಿ ಶ್ರಿ ಅನಂತಪದ್ಮನಾಭ ದೇವಸ್ಥಾನದ ಅಧ್ಯಕ್ಷರು, ನೋಟರಿ, ನ್ಯಾಯವಾದಿಗಳೂ ಆಗಿರುವ ಶ್ರೀನಿವಾಸ ಗೌಡರವರು ಶ್ರಮದಾನ ಕಾರ್ಯಕ್ರಮವನ್ನು ಗುದ್ದಲಿ ಪೂಜೆಯೊಂದಿಗೆ ಚಾಲನೆ ನೀಡಿದರು. ಅವರು ಮಾತನಾಡುತ್ತಾ ಶಿಬಿರದ ಮೂಲಕ ಜೀವನ ಕೌಶಲ ಮತ್ತು ಮೌಲ್ಯಗಳನ್ನು ಅರಿತುಕೊಂಡು ಬದುಕಿನ ಅನುಭವಗಳನ್ನು ಪಡಕೂಳ್ಳಬೇಕು. ಪರಸ್ಪರ ಸಹಕಾರ ಹೊದಾಣಿಕೆಯೊಂದಿಗೆ ಶಿಸ್ತುಬದ್ಧ ಜೀವನ ಕ್ರಮದ ಕಲಿಕೆ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಮೂಲಕ ಸಾನ್ಯವಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾದ ಬೆಳಾಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ಸಂಜೀವ ಗೌಡ ಮಂಡಾಲು, ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ಶುಭಹಾರೈಸಿದರು. ಯೋಜನಾಧಿಕಾರಿ ಪ್ರಕಾಶ್ ಗೌಡ ಮತ್ತು ಉಪಯೋಜನಾಧಿಕಾರಿಗಳಾದ ಲೋಹಿತ್ ಎಸ್ ರವರು ಅತಿಥಿಗಳನ್ನು ಗೌರವಿಸಿದರು.
ಶಿಬಿರಾರ್ಥಿಗಳಾದ ಶ್ರೀಲತಾ ಸ್ವಾಗತಿಸಿ, ಪ್ರಕ್ಷಿತ್ ವಂದಿಸಿದರು, ದೀಪಿಕಾ ಕಾರ್ಯಕ್ರಮ ನಿರೂಪಿಸಿದರು. ಏಳು ದಿನಗಳಲ್ಲಿ ಸ್ವಚ್ಚತಾ ಆಂದೋಲನ, ಬೃಹತ್ ಉಚಿತ ವೈದ್ಯಕೀಯ ಶಿಬಿರ, ಶಾಲಾವರಣ ಶುಚಿತ್ವ, ಶಾಲಾ ಮಕ್ಕಳಿಗೆ ಶೈಕ್ಷಣಿಕ ಔದ್ಯೋಗಿಕ ಮಾಹಿತಿ, ಸಾಂಸ್ಕೃತಿಕ ಕಾರ್ಯಕ್ರಮ ಮುಂತಾದ ವೈವಿಧ್ಯಮಯ ಚಟುವಟಿಕೆಗಳು ಆಯೋಜನೆಗೊಂಡಿವೆ.