ನಾರಾವಿ: “ಮನುಷ್ಯನು ಮೂಲತಃ ಸಂಘ ಜೀವಿ. ಒಬ್ಬಂಟಿಯಾಗಿ ಬದುಕಲು ಆತನಿಂದ ಸಾಧ್ಯವಿಲ್ಲ. ಮನುಷ್ಯನಲ್ಲಿ ಮನುಷ್ಯತ್ವ ಹೊರಹೊಮ್ಮದಿದ್ದಲ್ಲಿ ಆತ ಮನುಷ್ಯನಾಗಲಾರ.ಅನುಕಂಪ, ಅಂತಃಕರಣಗಳು ಆತನಲ್ಲಿ ಮೂಡಿದಾಗ ಆತ ನಿಜವಾದ ಮನುಷ್ಯನಾಗುತ್ತಾನೆ.ಹೀಗೆ ಮನುಷ್ಯನ ಜೀವನ ಪರಿಪೂರ್ಣತೆಯನ್ನು ಹೊಂದಬೇಕಾದರೆ ಅದು ಎನ್ ಎಸ್ ಎಸ್ ನಿಂದ ಮಾತ್ರ ಸಾಧ್ಯ”ಎಂದು ಶ್ರೀ ಧವಳಾ ಕಾಲೇಜು ಮೂಡಬಿದ್ರೆ ಇಲ್ಲಿನ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ರಾಹುಲ್ ಅವರು ಅಭಿಪ್ರಾಯಪಟ್ಟರು.
ಸಂತ ಅಂತೋನಿ ಪದವಿ ಕಾಲೇಜು ನಾರಾವಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.ಕಾಲೇಜಿನ ಪ್ರಾಚಾರ್ಯರಾದ ವಂ.ಡಾ.ಆಲ್ವಿನ್ ಸೆರಾವೊ ಮಾತನಾಡಿ ಎನ್ ಎಸ್ ಎಸ್ ಯುವಜನತೆಯ ಪರಿವರ್ತನೆಗೆ ಸೂಕ್ತ ವೇದಿಕೆ ಎಂದು ಹೇಳಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ.ಸ್ವಾ.ವೆಲೇರಿಯನ್ ಫೆರ್ನಾಂಡಿಸ್ “ಯುವ ಮನಸ್ಸುಗಳು ಜತೆಯಾದರೆ ಗಾಂಧೀಜಿಯವರ ಕನಸು ನನಸಾಗಬಹುದು .ಎನ್ ಎನ್ ಎಸ್ ಅದಕ್ಕೆ ಪೂರಕ” ಎಂದರು.
ಎನ್ ಎನ್ ಎಸ್ ಯೋಜನಾಧಿಕಾರಿಗಳಾದ ದಿನೇಶ್ ಬಿ ಕೆ ಬಳಂಜ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಸಂತ ಅಂತೋನಿ ಪದವಿ ಕಾಲೇಜಿನ ಉಪಪ್ರಾಂಶುಪಾಲರಾದ ಸಂತೋಷ್ ಸಲ್ಡಾನ, ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ರಿಚರ್ಡ್ ಮೊರಸ್, ವಿದ್ಯಾರ್ಥಿ ಸಂಘದ ನಾಯಕ ಕೇಶವ್ ಶರ್ಮ, ಎನ್ ಎಸ್ ಎಸ್ ಘಟಕದ ಕಾರ್ಯದರ್ಶಿಗಳಾದ ಕು.ವಿಘ್ನೇಶ್ ಆಚಾರ್ಯ ಹಾಗೂ ಕು. ಅನ್ವಿತಾ ರಾವ್ ಉಪಸ್ಥಿತರಿದ್ದರು.
ಹಿರಿಯ ಎನ್ ಎಸ್ ಎಸ್ ಸ್ವಯಂಸೇವಕಿ ಕು.ರಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.