ಸೀನಿಯರ್ ನ್ಯಾಷನಲ್ ನೆಟ್ ಬಾಲ್ ಕ್ರೀಡಾಕೂಟದಲ್ಲಿ ಎಸ್.ಡಿ.ಎಂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಕಂಚಿನ ಪದಕ

0

ಉಜಿರೆ: 41ನೇ ಸೀನಿಯರ್ ನ್ಯಾಷನಲ್ ನೆಟ್ ಬಾಲ್ ಕ್ರೀಡಾಕೂಟವು ಸೆ.21 ರಿಂದ 24ರ ವರೆಗೆ ಹರಿಯಾಣದ ಸೋನಿಪಟ್ ಜಿಲ್ಲೆಯ ಕನ್ಯಾ ಮಹಾ ವಿಶ್ವವಿದ್ಯಾನಿಲಯದ ಕರ್ಕೊಡ ಕಾಲೇಜಿನಲ್ಲಿ ನಡೆಯಿತು.

ಉಜಿರೆ ಎಸ್.ಡಿ.ಎಂ ಕ್ರೀಡಾ ವಿಭಾಗದಲ್ಲಿ ಒಟ್ಟು 6 ವಿದ್ಯಾರ್ಥಿಗಳು ಭಾಗವಹಿಸಿದ್ದು, 2 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ರಶ್ಮಿ ಮತ್ತು ಸುರಕ್ಷಾ ಆಚಾರ್ಯ ಸೀನಿಯರ್ ನ್ಯಾಷನಲ್ ನೆಟ್ ಬಾಲ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

ಇವರಿಗೆ ಎಸ್ ಡಿ ಎಂ ಕ್ರೀಡಾ ವಿಭಾಗದ ದೈಹಿಕ ಶಿಕ್ಷಕರಾದ ಸುದೀನ್ ಹಾಗೂ ಅಂತಾರಾಷ್ಟ್ರೀಯ ನೆಟ್ ಬಾಲ್ ಆಟಗಾರ ನಿತಿನ್ ಮತ್ತು ಕ್ರೀಡಾ ನಿರ್ದೇಶಕರಾದ ರಮೇಶ್ ಹೆಚ್ ತರಬೇತಿಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here