ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಸಂಶೋಧಕ ವಿಕ್ರಮ್ ತಿಮರಡ್ಕ ರವರು ಇಂಜಿನಿಯರಿಂಗ್ (ಸಿಂಥೆಟಿಕ್ ಕೆಮಿಸ್ಟ್ರಿ ಮತ್ತು ಬಯೋಲಾಜಿಕಲ್ ಕೆಮಿಸ್ಟ್ರಿ) ವಿಭಾಗದಲ್ಲಿ ಪ್ರೊ.ಇಟಾರು ಹಮಾಚಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಮೆಟಲ್-ಚೆಲೇಶನ್ ಅಸಿಸ್ಟೆಡ್ ಶಾರ್ಟ್ ಪೆಪ್ಟೈಡ್ ಟ್ಯಾಗ್ ಅನ್ನು ಬಳಸಿಕೊಂಡು ಕೋವೆಲೆಂಟ್ ಪ್ರೊಟೀನ್ ಮಾರ್ಪಾಡುಗಾಗಿ ರಾಸಾಯನಿಕ ಉಪಕರಣಗಳ ಅಭಿವೃದ್ಧಿ ಎಂಬ ವಿಷಯಕ್ಕೆ ಕ್ಯೋಟೋ ವಿಶ್ವವಿದ್ಯಾಲಯವು ಪಿಹೆಚ್ ಡಿ ಪದವಿಯನ್ನು ನೀಡಿ ಗೌರವಿಸಿದೆ.
ಇವರು ಉಜಿರೆಯ ಎಸ್ ಡಿ ಎಂ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದು, ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ನಾರಾಯಣ ಭಟ್ ಅಡ್ಕಟ್ಟಿಮಾರು, ವೆಂಕಟೇಶ್ವರಿ ದಂಪತಿಯ ಪುತ್ರ.
p>