ಉಜಿರೆ: ನೀಲಚಿಲುಮೆ ಶಾಲಾ ವಠಾರದಲ್ಲಿ 22ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀ ಗಣೇಶೋತ್ಸವದ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಸೆಪ್ಟೆಂಬರ್ 24ರಂದು ನಡೆಯಿತು.
ಕಾರ್ಯಕ್ರಮವನ್ನು ನೀರಚಿಲುಮೆಯ ಈಶ್ವರ ನಾಯ್ಕ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ವಿವಿಧ ಆಟೋ ಸ್ಪರ್ಧೆಗಳಿಗೆ ಚಾಲನೆ ನೀಡಿದರು, ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಷಾ ಕಿರಣ್ ಕಾರಂತ್, ಉಜಿರೆ ಪಂಚಾಯತ್ ಮಾಜಿ ಅಧ್ಯಕ್ಷರಾದ ಪುಷ್ಪ ಆರ್ ಶೆಟ್ಟಿ, ಆರ್ಬಿ ಫಾರ್ಮ್ ಆರ್ಬಿ ಕೃಷ್ಣಪ್ರಸಾದ್ ಎಂ, ಸೋನಿಯಾ ಯಶೋವರ್ಮ ನೀರಚಿಲುಮೆ, ಶಾಲೆಯ ಮುಖ್ಯೋಪಾಧ್ಯಯರಾದ ಸುಜಾತಾ ರೈ ವೈ ಹಾಗೂ ಜಗದೀಶ್ ನಾಯ್ಕ ಉಪಸ್ಥಿತರಿದ್ದು ಗೌರವ ಸಲಹೆಗಾರರಾದ ಆನಂದ್ ಗೌಡ, ನೇಮಣ್ಣ ನಾಯ್ಕ, ಗಣೇಶ್ ಟಿ, ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಅಧ್ಯಕ್ಷರಾದ ರಾಜೇಶ್ ಗೌಡ ಸ್ವಾಗತಿಸಿ ಉಪಾಧ್ಯಕ್ಷರಾದ ದಿವಾಕರ್ ಇವರು ವಂದಿಸಿ ಶಿವಪ್ರಸಾದ್ ನಿರೂಪಿಸಿದರು.
p>