ಮಚ್ಚಿನ: ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆಯುವು ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಸೆ.23 ರಂದು ಮಚ್ಚಿನ ಸಮುದಾಯ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಮಾತನಾಡಿ 2022-23 ನೇ ಸಾಲಿನಲ್ಲಿ ಸಂಘದ ಕಾರ್ಯವನ್ನು ಪರಿಗಣಿಸಿ ದ.ಕ.ಜಿಂ.ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ವತಿಯಿಂದ ಪ್ರೋತ್ಸಾಹಕ ಪ್ರಶಸ್ತಿ ಮತ್ತು ಮಂಗಳೂರು ದ.ಕ.ಕೃಷಿ ಅಭಿವೃದ್ಧಿ ಸಹಕಾರ ಸಂಘದ ವತಿಯಿಂದ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.ಪ್ರಸ್ತಕ ಸಾಲಿನಲ್ಲಿ 59 ಲಕ್ಷ ರೂಪಾಯಿ ಲಾಭಗಳಿಸಿ ಶೇ.15% ಡಿವಿಡೆಂಡ್ ನೀಡಲಾಗಿದೆ.ಸಂಘದ ವಾರ್ಷಿಕ ವಹಿವಾಟು 133 ಕೋಟಿ ರೂಪಾಯಿ ನಡೆಸಿದೆ.ಡೆವಿಡೆಂಡ್ ನಲ್ಲಿ ಶೇ.5%ರಷ್ಟು ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಮೀಸಲಿಡಲಾಗುವುದು ಎಂದು ಹೇಳಿ ಅವರು ಸಂಘದ ಏಳಿಗೆಗೆ ಸದಸ್ಯರ ಸಹಕಾರ ಅತ್ಯಗತ್ಯ ಎಂದರು.
ಸಂಘದ ನಿದೇರ್ಶಕರುಗಳಾದ ಗಣೇಶ್ ಅರ್ಕಜೆ, ಶ್ರೀಧರ ಪೂಜಾರಿ, ಸುಜಾತಾ ಸಾಲ್ಯಾನ್, ಬೇಬಿ, ರಾಜೇಶ್ ನಾಯ್ಕ, ಆನಂದ, ಚಿತ್ತರಂಜನ್, ದೀಕ್ಷಿತ್ ಹಾಗೂ ವಲಯ ಮೇಲ್ವಿಚಾರಕ ಸಿರಾಜುದ್ದೀನ್ ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿ ಕಿಶೋರ್ ಪ್ರಾರ್ಥಿಸಿದರು.ಸಂಘದ ನಿದೇರ್ಶಕ ಶಿವಾರಮ ಬಂಗೇರ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಮೋಹನ್ ಗೌಡ ವಂದಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಕ್ಷಣ್ ನಿರೂಪಿಸಿದರು.ಸಿಬ್ಬಂದಿಗಳಾದ ಗಣೇಶ, ವನಿತಾ,ಎಕಲತಾ ಶೆಟ್ಟಿ ಸಹಕರಿಸಿದರು.