ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ- ರೂ.169ಕೋಟಿ ವ್ಯವಹಾರ-ಸದಸ್ಯರಿಗೆ ಶೇ.18%ಡಿವಿಡೆಂಡ್

0

ಉಜಿರೆ: ಉಜಿರೆ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದ 13ನೇ ವಾರ್ಷಿಕ ಮಹಾಸಭೆಯು ಸೆ. 23ರಂದು ಉಜಿರೆ ಎಸ್.ಕೆ.ಮೆಮೋರಿಯಲ್ ಹಾಲ್ ನಲ್ಲಿ ಸಂಘದ ಅಧ್ಯಕ್ಷರಾದ ವಲೇರಿಯನ್ ರೊಡ್ರಿಗಸ್ ರವರ ಅದ್ಯಕ್ಷತೆಯಲ್ಲಿ ನಡೆಯಿತು.

ಸಂಘವು ಒಟ್ಟು 3322ಸದಸ್ಯರನ್ನು ಹೊಂದಿದ್ದು ರೂ 34.59ಲಕ್ಷ ಪಾಲು ಬಂಡವಾಳ ಹೊಂದಿದೆ.ರೂ.4159.83ಲಕ್ಷ ಠೇವಣಿ ಸಂಗ್ರಹಿಸಿ 169ಕೋಟಿ ವ್ಯವಹಾರ ನಡೆಸಿ ರೂ. 50.67ಲಕ್ಷ ನಿವ್ವಳ ಲಾಭ ಗಳಿಸಿ ಶೇ. 18%ಡಿವಿಡೆಂಡ್ ಘೋಷಿಸಿದರು.ಸಾಮಾಜಿಕ ಚಟುವಟಿಕೆ ಗಳಿಗೆ ಸಾರ್ವಜನಿಕ ಹಿತಾಸಕ್ತಿ ನಿಧಿಯಿಂದ ರೂ.2,45,547/-, ಬೃಹತ್ ಉಚಿತ ಅರೋಗ್ಯ ಸಪಾಸಣಾ ಶಿಬಿರಕ್ಕೆ ರೂ.1,06,969/- ವ್ಯಹಿಸಲಾಗಿದೆ ಎಂದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಅನಿಲ್ ಡಿಸೋಜಾ, ನಿರ್ದೇಶಕರಾದ ಸಿಲ್ವೆಸ್ಟರ್ ಮೋನಿಸ್, ಸುನಿಲ್ ಮೊರಾಸ್, ಅರುಣ್ ಸಂದೇಶ್ ಡಿಸೋಜಾ, ಗೀತಾ ಫೆಲ್ಸಿಯಾನಾ ಡಿಸೋಜಾ, ಫೆಲಿಕ್ಸ್ ಡಿಸೋಜಾ, ಬೆನೆಡಿಕ್ಟಾ ಸಲ್ಡಾನ್ಹ, ಉಪಸ್ಥಿತರಿದ್ದರು.

ಭೂ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸುಬೇದಾರ್ ಮೆಲ್ವಿನ್ ಫೆರ್ನಾಂಡಿಸ್, ಉಜಿರೆ ಗ್ರಾಮ ಪಂಚಾಯತ್ ನೂತನ ಸದಸ್ಯರಾಗಿ ಆಯ್ಕೆಯಾದ ಅನಿಲ್ ಪ್ರಕಾಶ್ ಡಿಸೋಜಾ, ವಕೀಲ ಶಿಕ್ಷಣ ಪಡೆದ ವಕೀಲೆ ಅನ್ಸಿಲ್ಲಪ್ರೀತಿ ಪಿಂಟೊ, ರಷ್ಯಾದಲ್ಲಿ ವೈದ್ಯರಾಗಿ ಶಿಕ್ಷಣ ಪಡೆದು ವೈದ್ಯ ವೃತ್ತಿ ಮಾಡುತಿರುವ, ಡಾ.ರೂಪಲ್ ನೊರೊನ್ಹಾ, ಎಂ ಕಾಂ ಪದವಿಯಲ್ಲಿ ಕಾಲೇಜಿನಲ್ಲಿ ದ್ವಿತೀಯ ಸ್ಥಾನ ಜಾನೆಟ್ ಸೆರಾವೋ, ಇವರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಉತ್ತಮ ಅಂಕಗಳಿಸಿದ ಸಂಘದ ಸದಸ್ಯರ ಶಾಲಾ ವಿದ್ಯಾರ್ಥಿಗಳನ್ನು ಪ್ರೋತ್ಸಹದನ ವಿತರಿಸಲಾಯಿತು.

ವೈದ್ಯಕೀಯ ನೆರವು, ನೂತನ ಗ್ರಹ ನಿರ್ಮಾಣಕ್ಕೆ ಆರ್ಥಿಕ ನೆರವು, ಪಿಗ್ಮಿ ಸಂಗ್ರಾಹಕರಿಗೆ ಆರ್ಥಿಕ ನೆರವು ವಿತರಿಸಲಾಯಿತು.

ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ವಾರ್ಷಿಕ ವರದಿಯನ್ನು ಮಂಡಿಸಿದರು.

ಸಂಘದ ಸಿಬ್ಬಂದಿಗಳಾದ ರವೀನಾ ಕ್ರಾಸ್ತಾ, ಪ್ರವೀಣ್ ಪಿಂಟೊ, ಪ್ರವೀಣ್ ಕ್ಲಿಫೋರ್ಡ್ ಪಾಯ್ಸ್, ಮೆಲಿಟಾ ಪಾಯ್ಸ್, ಜಾಸ್ಮಿನ್ ನಿಶಾ ವಾಸ್, ರೀಷಲ್ ಐವಿ ಮೆನೇಜಸ್, ಜಾನೆಟ್ ಸೆರಾವೋ, ಪಿಗ್ಮಿ ಸಂಗ್ರಾಹಕರಾದ ಅನಿಲ್ ಜೊಸ್ಸಿ ಮೊರಾಸ್, ಆಲ್ವಿನ್ ಸಂತುಮಾಯೆರ್, ಶ್ರೀಕಲಾ, ಲಿಗೋರಿ ವಾಸ್, ಪ್ರಮೋದ್, ಚೇತನ್, ಶ್ರೀಕಾಂತ್, ಫ್ರಾನ್ಸಿಸ್ ಮೊರಾಸ್ ಸಹಕರಿಸಿದರು.

ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೋಜಾ ಸ್ವಾಗತಿಸಿ, ನಿರ್ದೇಶಕ ಸಿಲ್ವೆಸ್ಟರ್ ಮೋನಿಸ್ ವಂದಿಸಿದರು.ನಿರ್ದೇಶಕಿ ಗೀತಾ ಫೆಲಿಸಿಯ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಸುನಿಲ್ ಮೊರಾಸ್ ಸನ್ಮಾನಿತರ ಪರಿಚಯ ಮಾಡಿದರು.

p>

LEAVE A REPLY

Please enter your comment!
Please enter your name here