ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪುರಾಣ-ವಾಚನ ಪ್ರವಚನ ಸಮಾರೋಪ ಸಮಾರಂಭ- ಧರ್ಮದ ಮರ್ಮವನ್ನರಿತು ಆಚರಣೆ ಮಾಡಿದರೆ ಜೀವನ ಪಾವನವಾಗುತ್ತದೆ: ಡಿ.ವೀರೇಂದ್ರ ಹೆಗ್ಗಡೆ

0

ಉಜಿರೆ: ಧರ್ಮದ ಮರ್ಮವನ್ನರಿತು ನಮ್ಮ ದೈನಂದಿನ ಜೀವನದಲ್ಲಿ ಆಚರಣೆ ಮಾಡಿದರೆ ಜೀವನ ಪಾವನವಾಗುತ್ತದೆ.ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿಯಿಂದ ಸಾಮಾಜಿಕ ಸಾಮರಸ್ಯ ಮೂಡಿ ಬರುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಸೆ.17ರಂದು ಧರ್ಮಸ್ಥಳದಲ್ಲಿ 52ನೆ ವರ್ಷದ ಪುರಾಣ ವಾಚನ-ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಪುರಾಣ ವಾಚನ- ಪ್ರವಚನ ಶ್ರವಣದಿಂದ ಭಗವಂತನ ದರ್ಶನವಾಗಿ ಆಧ್ಯಾತ್ಮಿಕ ಉನ್ನತಿಯನ್ನು ಹೊಂದಬಹುದು.ರಾಮಾಯಣ ಮತ್ತು ಮಹಾಭಾರತ ಅಲ್ಲದೆ ವಿವಿಧ ಪೌರಾಣಿಕ ಪ್ರಸಂಗಗಳನ್ನು ಆಯ್ಕೆ ಮಾಡಿ ಪುರಾಣ ವಾಚನ-ಪ್ರವಚನಕ್ಕೆ ವಿಶೇಷ ಆಕರ್ಷಕ ಆಯಾಮವನ್ನು ರೂಪಿಸುವಲ್ಲಿ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಪ್ರೇರಣೆಯನ್ನು ಹೆಗ್ಗಡೆಯವರು ಶ್ಲಾಘಿಸಿದರು.

ಪುರಾಣ ವಾಚನ-ಪ್ರವಚನದಿಂದ ಸಮಯದ ಸದುಪಯೋಗವಾಗುವುದಲ್ಲದೆ, ಧರ್ಮಜಾಗೃತಿಯೊಂದಿಗೆ ಆರೋಗ್ಯಪೂರ್ಣ ಸಮಾಜ ರೂಪುಗೊಳ್ಳುತ್ತದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.ಸೆ.17ರಂದು ಧರ್ಮಸ್ಥಳದ ಸುಪ್ರಿತಾ ವಾಚನ ಮಾಡಿದರು.ಉಜಿರೆ ಅಶೋಕ ಭಟ್ ಪ್ರವಚನ ಮಾಡಿದರು.

63 ದಿನಗಳಲ್ಲಿ ನಡೆದ ಪುರಾಣ ವಾಚನ-ಪ್ರವಚನದಲ್ಲಿ ಭಾಗವಹಿಸಿದ 13 ವಾಚನಕಾರರು ಮತ್ತು 18 ಮಂದಿ ಪ್ರವಚನಕಾರರನ್ನು ಹೆಗ್ಗಡೆ೦ವರು ಗೌರವಿಸಿ ಅಭಿನಂದಿಸಿದರು.ಹೇಮಾವತಿ ವೀ.ಹೆಗ್ಗಡೆಯವರು ಉಪಸ್ಥಿತರಿದ್ದರು.ಕಾರ್ಯಕ್ರಮ ನಿರ್ವಹಿಸಿದ ಶ್ರೀನಿವಾಸ ರಾವ್ ಧನ್ಯವಾದವಿತ್ತರು.

ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ, ದೇವಳದ ಪಾರುಪತ್ಯಗಾರ್ ಲಕ್ಷ್ಮೀ ನಾರಾಯಣ ರಾವ್ ಮತ್ತು ಸಂತೋಷ್ ಗೌಡ ಸಮಾರಂಭದ ಆಯೋಜನೆಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here